ತುಕ್ಕು ಹಿಡಿದವರೆಲ್ಲಾ ಬಿಜೆಪಿ ಸೇರುತ್ತಿದ್ದಾರೆ -ಮಧು ವ್ಯಂಗ್ಯ
ಮಂಗಳೂರು : ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದನ್ನು ಖಂಡಿಸಿರುವ ಸಹೋದರ ಮಧು ಬಂಗಾರಪ್ಪ ಅಣ್ಣನ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು, “ಇದೀಗ ಎಲ್ಲಾ ಕಡೆಗಳಲ್ಲಿ ಸೋತವರು ಪಕ್ಷ ಬಿಟ್ಟು ಬಿಜೆಪಿಗೆ ಸೇರುತ್ತಿದ್ದಾರೆ. ಇವರೆಲ್ಲರೂ ತುಕ್ಕು ಹಿಡಿದವರು. ಕುಮಾರ್ ಬಂಗಾರಪ್ಪ, ಜಯಪ್ರಕಾಶ್ ಹೆಗ್ಡೆ ಈಗಾಗಲೇ ಸೋತು ಹೋಗಿದ್ದು ಇವರೆಲ್ಲರನ್ನೂ ಬಿಜೆಪಿ ಸೇರ್ಪಡೆಗೊಳಿಸುತ್ತಿದೆ. ಇವರಿಂದ ಲೇನಾದರೂ ಲಾಭವಿದೆಯೇ” ಎಂದು ಜೆಡಿಎಸ್ಸಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಕೇಳಿದರು.
ಯಡ್ಡಿಯೂರಪ್ಪ ಮಹಾನ್ ಸುಳ್ಳುಗಾರ ಎಂದ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅರ್ಹತೆ ಅವರಿಗೇನಿದೆ ಎಂದು ಪ್ರಶ್ನಿಸಿದರು. ಕೆಲವು ಪ್ರಕರಣಗಳಲ್ಲಿ ಅವರಿಗೆ ತಾಂತ್ರಿಕವಾಗಿ ಜಯ ಸಿಕ್ಕಿರಬಹುದು. ಆದರೆ ಇನ್ನೂ ಹಲವು ಪ್ರಕರಣಗಳು ಅವರನ್ನು ಸುತ್ತಿಕೊಂಡಿವೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ತಮಗೆ ಆಹ್ವಾನ ಬಂದಿದೆ. ಆದರೆ ಪಕ್ಷಾಂತರ ಮಾಡುವಷ್ಟು ದುರಾಸೆ ನನಗಿಲ್ಲ ಎಂದರು.
loading...
No comments