Breaking News

ಸಂಚಾರಿ ಪೊಲೀಸ್ ಎಸೈ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿದ ಕಮಿಷನರ್



ಮಂಗಳೂರು : ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕಂಡೆಕ್ಟರ್ ನಿಗದಿತ ಜಾಗಕ್ಕೆ ಕರೆದೊಯ್ಯದೇ ಅರ್ಧದಲ್ಲಿ ಇಳಿಸಲು ಯತ್ನಿಸಿ, ಟ್ರಾಫಿಕ್ ಪೊಲೀಸರ ಸಕಾಲಿಕ ಕಾರ್ಯಾಚರಣೆ ಮೂಲಕ ಮಹಿಳೆ ಸಮಸ್ಯೆಗೆ ಸ್ಪಂದಿಸಿದ ಟ್ರಾಫಿಕ್ ಪೊಲೀಸರಿಗೆ ಇದೀಗ ಬಹುಮಾನ ಸಿಕ್ಕಿದೆ.ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಟ್ರಾಫಿಕ್ ಪೊಲೀಸರ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ 5,000 ರೂ ಬಹುಮಾನ ನೀಡಿ ಗೌರವಿಸಿದ್ದಾರೆ.

ಮಾರ್ಚಿ 16ರಂದು ಮಹಿಳೆಯೊಬ್ಬರು ಪೊಲೀಸರಿಗೆ ಕರೆ ಮಾಡಿ 15 ನಂಬ್ರದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದಾಗ ತನಗಾದ ಸಂಕಷ್ಟವನ್ನು ವಿವರಿಸಿದ್ದರು. ತಾನು ಮಂಗಳಾದೇವಿಗೆ ಟಿಕೆಟ್ ಪಡೆದಿದ್ದರೂ, ಕಂಕನಾಡಿಯಲ್ಲಿ ಬಸ್ಸು ಕಂಡೆಕ್ಟರ್ ತನ್ನನ್ನು ಇಳಿಸಲು ಯತ್ನಿಸಿದ್ದಾರೆ ಎಂದು ದೂರಿದ್ದರು.

ಕೂಡಲೇ  ಸಂಚಾರ ಪೂರ್ವ ಪೊಲೀಸ್ ಠಾಣಾ ಉಪನಿರೀಕ್ಷಕ ಆರ್ ಕೆ ಗವ್ವಾರ್ ಮಹಿಳೆಯನ್ನು ಅದೇ ಬಸ್ಸಿನಲ್ಲಿ ಮಂಗಳಾದೇವಿಯವರೆಗೆ ಕರೆದುಕೊಂಡು ಹೋಗುವಂತೆ ಮಾಡಿದ್ದರು.

ಸಾರ್ವಜನಿಕರ ಸಮಸ್ಯೆಗೆ ಸಕಾಲಿಕವಾಗಿ ಸ್ಪಂದಿಸಿದ ಆರ್ ಕೆ ಗವ್ವಾರ್ ಅವರನ್ನು ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಶ್ಲಾಘನಾ ಪತ್ರ ಮತ್ತು 5 ಸಾವಿರ ರೂ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
k ale

loading...

No comments