Breaking News

ಮೋಡ ಬಿತ್ತನೆಗೆ ಪರಿಸರ ಸ್ನೇಹಿ ಡ್ರೋನ್ ಅಭಿವೃದ್ಧಿಪಡಿಸಿದ ಕರುಣಾಕರ್ ನಾಯಕ್


ಉಡುಪಿ : ಮೋಡ ಬಿತ್ತನೆಗೆ ರಿಮೋಟ್ ನಿಯಂತ್ರಿತ ಪರಿಸರ ಸ್ನೇಹಿ ಡ್ರೋನನ್ನು ಅಭಿವೃದ್ಧಿಪಡಿಸಲಾಗಿದೆ. ಈ ಡ್ರೋನ್ ಪರಿಸರ ಸ್ನೇಹಿ ಆಗಿರುವಂತೆ ಜೇಬು ಸ್ನೇಹಿ ಕೂಡ ಆಗಿದೆ. ಏಕೆಂದರೆ ಈ ಡ್ರೋನನ್ನು ಕಡಿಮೆ ಬಂಡವಾಳದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯೋಗಿಕ ಅಂತರಿಕ್ಷ ವಾಹನ ಪ್ರದರ್ಶನವನ್ನು ಭಾನುವಾರ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿತ್ತು.

ಡ್ರೋನ್ ಮಾದರಿಯನ್ನು ತಯಾರಿಸಲು ಏರೋಮಾಡೆಲಿಂಗ್ ಮತ್ತು ಹೆಲಿಕಾಪ್ಟರ್ ಮಾದರಿಗಳನ್ನು ಅಳವಡಿಸಲಾಗಿದೆ ಎಂದು ಡ್ರೋನ್ ಅಭಿವೃದ್ಧಿಪಡಿಸಿದ ಕರುಣಾಕರ್ ನಾಯಕ್ ಹೇಳಿದ್ದಾರೆ. ಈ ಡ್ರೋನ್ ಕಾರ್ಯನಿರ್ವಹಣೆಗೆ ಯಾವುದೇ ಪೈಲೆಟ್ ಅವಶ್ಯಕತೆ ಇಲ್ಲ. ಅದಕ್ಕೆ ಒಂದು ಏರ್ ಡ್ರೋಮ್ ಅಥವಾ ಹೆಲಿಪ್ಯಾಡ್ ಮಾತ್ರ ಸಾಕು. ಹಾಗಾಗಿ ಅತಿ ಚಿಕ್ಕ ಬಂಡವಾಳದಲ್ಲಿ ಡ್ರೋನ್ ರಚನೆ ಮತ್ತು ನಿರ್ವಹಣೆ ಮಾಡಬಹುದು ಎಂದು ಕರುಣಾಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸಕ್ತ ಮೋಡ ಬಿತ್ತನೆಗೆ ಬಳಸುತ್ತಿರುವ ವಿಮಾನಗಳಿಗೆ ಹೋಲಿಸಿದರೆ ಡ್ರೋನ್ ಬಹಳ ಉಪಯುಕ್ತಕಾರಿ, ಏಕೆಂದರೆ ವಿಮಾನಗಳಿಗೆ ದೊಡ್ಡ ಮೊತ್ತದ ಬಂಡವಾಳದೊಂದಿಗೆ ಇಬ್ಬರು ಪೈಲೆಟುಗಳು ಬೇಕು ಎಂದು ಅವರು ತಿಳಿಸಿದ್ದಾರೆ.

ಮೋಡ ಬಿತ್ತನೆಗೆ ಸಿಲ್ವರ್ ಐಯೋಡೈಡ್ ಮಿಶ್ರಣ ಬಳಸಲಾಗುತ್ತದೆ. ಅದು ಕೇವಲ 5ರಿಂದ 10 ಕೇಜಿಯಾದರೂ ವೆಚ್ಚದಾಯಕ. ಮೋಡ ಬಿತ್ತನೆಗೆ ಬಳಸಬಹುದಾದ ಈ ಡ್ರೋನ್, ವಿಮಾನಗಳು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ನಿರ್ವಹಿಸಲ್ಲದು ಎಂದು ಅವರು ವಿವರಿಸಿದ್ದಾರೆ.
kale

loading...

No comments