Breaking News

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮುಖಂಡನ ಹತ್ಯೆ

ನವದೆಹಲಿ: ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಬಿಎಸ್‌ಪಿಯ ಸ್ಥಳೀಯ ಮುಖಂಡ ಮೊಹಮ್ಮದ್ ಶಮಿ ಅವರನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮೊಹಮದ್‌ ಶಮಿ ಅವರು ತಮ್ಮ ಕಚೇರಿಯ ಹೊರಗೆ ನಿಲ್ಲಿಸಿದ್ದ ಕಾರಿನತ್ತ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆ ಶಮಿ ಅವರು ನೆಲಕ್ಕುರುಳಿದ್ದಾರೆ ಎಂದು ವರದಿಯಾಗಿದೆ.
ಅಲಹಾಬಾದ್‌ನ ಮೌ ಐಮಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗುಂಡು ಹಾರಿಸಿದ ದುಷ್ಕರ್ಮಿಗಳ ಪರಾರಿಯಾಗಿದ್ದಾರೆ.
60 ವರ್ಷದ ಶಮಿ ಅವರು ಬಿಎಸ್‌ಪಿಯ ಸ್ಥಳೀಯ ಮುಖಂಡ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಹಾಗೂ ಶಮಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
-pti
loading...

No comments