Breaking News

ಅನಾಥ ಮಹಿಳೆಯನ್ನು ರಕ್ಷಿಸಿದ ಸಾಮಾಜಿಕ ಕಾರ್ಯಕರ್ತ


ಉಡುಪಿ : ಅನಾಥವಾಗಿ ಬಿದ್ದಿದ್ದ 45 ವರ್ಷದ ನಿರ್ಗತಿಕ ಮಹಿಳೆಯನ್ನು ಅಂಬಲಪಾಡಿ ನಿವಾಸಿ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಶನಿವಾರ ಮಧ್ಯಾಹ್ನ ರಕ್ಷಿಸಿದ್ದಾರೆ. ಮಹಿಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಡಂಕೂರು ಸೇತುವೆ ಬಳಿ ಅನಾಥವಾಗಿ ಬಿದ್ದಿದ್ದರು. ಈ ಕುರಿತು ಗೆಳೆಯರಿಂದ ಮಾಹಿತಿ ಪಡೆದ ವಿಷು ಶೆಟ್ಟಿ ಶನಿವಾರ ಮಧ್ಯಾಹ್ನ ಮಹಿಳೆಯನ್ನು ರಕ್ಷಿಸಿ ಅಜ್ಜರಕಾಡಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.

ಕೃಶರಾಗಿದ್ದ ಮಹಿಳೆ ನಡೆದಾಡುವುದಕ್ಕಾಗಲೀ, ಮಾತನಾಡುವುದಕ್ಕಾಗಲೀ ಅಸಮರ್ಥರಾಗಿದ್ದಾರೆ.ಮಹಿಳೆ ಎಲ್ಲಿಂದ ಬಂದರು, ಯಾಕಾಗಿ ಉಡುಪಿಗೆ ಬಂದರು ಈ ವಿಚಾರಗಳ ಬಗ್ಗೆ ತಿಳಿದುಬಂದಿಲ್ಲ. ಮಹಿಳೆ ಚೇತರಿಸಿಕೊಂಡ ಬಳಿಕವಷ್ಟೆ ಇದು ತಿಳಿದು ಬರಬೇಕಾಗಿದೆ.
k-ale

loading...

No comments