ವೋಡಾಫೋನ್ ಐಡಿಯಾ ವಿಲೀನ
ನವದೆಹಲಿ : ದೇಶದಲ್ಲಿ ಬಹುದೊಡ್ಡ ಟೆಲಿಕಾಂ ಸೇವೆ ಒದಗಿಸುವ ನಿಟ್ಟಿನಲ್ಲಿ ತನ್ನಲ್ಲಿರುವ 394 ದಶಲಕ್ಷ ಗ್ರಾಹಕರೊಂದಿಗೆ ಐಡಿಯಾ ಟೆಲಿಕಾಂ ಸಂಸ್ಥೆಯು ವೊಡಾಫೋನ್ ಇಂಡಿಯಾ ಮತ್ತು ವೊಡಾಫೋನ್ ಮೊಬೈಲ್ ಸೇವಾ ಸಂಸ್ಥೆಯೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದೆ.
ಸಂಯೋಜನೆಗೊಂಡ ಸಂಸ್ಥೆಯಲ್ಲಿ ವೊಡಾಫೋನ್ ಶೇ.45.1 ಪಾಲು ಹೊಂದಿರಲಿದ್ದು, ವಿಲೀನ ಪೂರ್ಣಗೊಂಡ ಬಳಿಕ 38,740 ಮೌಲ್ಯದ ಶೇ.4.9 ರಷ್ಟು ಐಡಿಯಾ ಪ್ರವರ್ತಕರಿಗೆ ವರ್ಗಾವಣೆಯಾಗಲಿದೆ.
ಕುಮಾರ್ ಮಂಗಳಂ ಬಿರ್ಲಾ ಹಾಗೂ ಐಡಿಯಾ ಸಮೂಹದ ಇತರರು ಶೇ.26 ಪಾಲು ಹೊಂದಲಿದ್ದಾರೆ. ಇನ್ನುಳಿದ ಭಾಗ ಸಾರ್ವಜನಿಕರಲ್ಲಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
loading...
No comments