Breaking News

ನಿದ್ದೆ ಅತಿಯಾದರೂ ಆರೋಗ್ಯಕ್ಕೆ ಮಾರಕ


ಅತಿಯಾಗಿ  ತಿಂದರೆ ಅಮೃತವೂ ವಿಷವಂತೆ. ಈ ಮಾತು ಸಾರ್ವಕಾಲಿಕವಾಗಿದ್ದು ಬಹುತೇಕ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ. ಹಣ, ಅಧಿಕಾರ, ಆಹಾರ, ನಿದ್ದೆ ಎಲ್ಲವೂ ಒಂದು ಮಿತಿಯಲ್ಲಿದ್ದರೇ ಒಳ್ಳೆಯದು. ನಮ್ಮ ಆರೋಗ್ಯಕ್ಕೆ ನಿದ್ದೆ ಅಗತ್ಯವಾಗಿ ಬೇಕು. ಆದರೆ ದಿನಕ್ಕೆ ಆರರಿಂದ ಎಂಟು ಗಂಟೆ ಬೇಕಾದಷ್ಟಾಯಿತು. ಅಮೇರಿಕಾದ American Academy of Sleep Medicine ಎಂಬ ಸಂಸ್ಥೆಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಅಗತ್ಯಕ್ಕೂ ಹೆಚ್ಚಿನ ನಿದ್ದೆಯಿಂದ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆ ಹೆಚ್ಚುತ್ತದೆ. ಒಂದು ಸಂಶೋಧನೆಯಲ್ಲಿ ದಿನಕ್ಕೆ ಒಂಬತ್ತರಿಂದ ಹನ್ನೊಂದು ಗಂಟೆ ನಿದ್ರಿಸುವ ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಇವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇತರರಿಗಿಂತ 38% ಹೆಚ್ಚು ಇರುವುದು ಪತ್ತೆಯಾಗಿದೆ. ಸುಖನಿದ್ದೆಗೂ ಸ್ಥೂಲಕಾಯಕ್ಕೂ ನೇರವಾದ ಸಂಬಂಧವಿದೆ. ಹೆಚ್ಚು ನಿದ್ದೆ ಎಂದರೆ ಕಡಿಮೆ ವ್ಯಾಯಾಮ ಹಾಗೂ ಕಡಿತಗೊಂಡ ದೈಹಿಕ ಮತ್ತು ಮೆದುಳಿನ ಚಟುವಟಿಕೆ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗದೇ ಸ್ಥೂಲಕಾಯ ಶೀಘ್ರವಾಗಿ ಆವರಿಸುವುದು ಮಾತ್ರವಲ್ಲ, ನಿಧಾನವಾಗಿ ಏರುತ್ತಲೂ ಹೋಗುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಬೆನ್ನ ಮೇಲೆ ಮಲಗುತ್ತೇವೆ. ನಿದ್ದೆಯ ಹೊತ್ತಿನಲ್ಲಿ ನಮ್ಮ ಸ್ನಾಯುಗಳು ಸಡಿಲವಾಗಿರುವ ಕಾರಣ ಬೆನ್ನಮೂಳೆ ಅತಿ ಹೆಚ್ಚು ಬಾಗುವ ಸಂಭವವಿದೆ. ಇದನ್ನು ತಡೆಯಲು ಅಲ್ಲಿನ ಸ್ನಾಯುಗಳು ಪೆಡಸಾಗುತ್ತವೆ. ಹೆಚ್ಚು ಮಲಗುವ ಮೂಲಕ ಬೆನ್ನಿನ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚು ಮಲಗಿ ಎದ್ದಾಗ ಬೆನ್ನಿನ ಕೆಳಭಾಗ ಸುಲಭವಾಗಿ ಏಳಲು ಅಸಾಧ್ಯವಾಗಿಸುತ್ತದೆ. ಬೆನ್ನು ಮೂಳೆಯ ನಡುವಣ ನರವೂ ಘಾಸಿಗೊಳ್ಳುವ ಸಾಧ್ಯತೆ ಇದೆ. ಇದು ಬೆನ್ನುನೋವಿಗೆ ಕಾರಣವಾಗುತ್ತದೆ
loading...

No comments