ಸರ್ಕಾರಿ ಅಧಿಕಾರಿಗಳು ಪಾನ್ ಜಗಿಯುವಂತಿಲ್ಲ: ಆದಿತ್ಯನಾಥ್
ನವದೆಹಲಿ : ಕರ್ತವ್ಯದ ಅವಧಿಯಲ್ಲಿ ಪಾನ್, ಪಾನ್ ಮಸಾಲ ಮತ್ತು ಗುಟ್ಕಾವನ್ನು ಜಗಿಯಬಾರದೆಂದು ರಾಜ್ಯ ಸರ್ಕಾರಿ ನೌಕರರಿಗೆ ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದನ್ನು ಕಂಡ ಯೋಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಭವನ್ ಎಂದು ಕರೆಯಲ್ಪಡುವ ಕಟ್ಟಡ ಸಮುಚ್ಫಯದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ, ಕಾರ್ಯಾಲಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳ ವಸತಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳ ನಿವಾಸವಿದೆ. ಈ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
loading...
No comments