ಚೂರಿ ಹಾಕಿ ಪರಾರಿಯಾದವನ ಬೆನ್ನ ಹಿಂದೆ ಬಿದ್ದ ಬೀದಿ ನಾಯಿ
ಚೆನ್ನೈ: ವೆಸ್ಟ್ ಮಂಬಲಂನ ಹಾಸ್ಟೆಲ್ ಒಂದರ ಹೊರಗೆ 31 ವರ್ಷದ ಮಹಿಳೆಯೊಬ್ಬರಿಗೆ ಆಕೆಯ ಮಾಜಿ ಸಹೋದ್ಯೋಗಿಯೊಬ್ಬ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬೀದಿ ನಾಯಿಯೊಂದರ ನೆರವಿನಿಂದ ಸ್ಥಳೀಯರು ಶಂಕಿತ ವ್ಯಕ್ತಿಯನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲ್ಕತ ಮೂಲದ ಸುಚಿಸ್ಮಿತ ಬುಧವಾರ ಬೆಳಗ್ಗೆ ತಮ್ಮ ಹಾಸ್ಟೆಲ್‌ನಿಂದ ಹೊರ ಬಂದು ಬಸ್ ನಿಲ್ದಾಣದ ಕಡೆಗೆ ನಡೆಯುತ್ತಿದ್ದಾಗ, ಹೊಂಚು ಹಾಕಿದ್ದ ಮಾಜಿ ಸಹೋದ್ಯೋಗಿ ಶಿವಕಾಶಿಯ ರಘುನಾಥ್ (23) ಎಂಬಾತನ ಆಕೆಯ ಹೊಟ್ಟೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಘುನಾಥ್ ಮಹಿಳೆಗೆ ಇರಿಯುವುದನ್ನು ಕಂಡ ಸ್ಥಳೀಯರು, ಬೀದಿ ನಾಯಿಯೊಂದನ್ನು ಆತನ ಮೇಲೆ ಛೂ ಬಿಟ್ಟರು. ನಾಯಿ ಬೆನ್ನಟ್ಟಿ ಬರುವುದನ್ನು ಕಂಡ ಆರೋಪಿ ರಘುನಾಥ್ ಬೀದಿಯ ಮೂಲೆಯೊಂದರಲ್ಲಿ ಅಡಗಿ ಕುಳಿತ. ಆತನನ್ನು ಪತ್ತೆ ಮಾಡಿದ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು.
loading...
No comments