Breaking News

ಇಂದಿನಿಂದ ಕೋಕಾ ಕೋಲ, ಪೆಪ್ಸಿ ಮಾರಾಟ ಬಂದ್.



ತಮಿಳುನಾಡು : ತಮಿಳುನಾಡು ವರ್ತಕರು ​ಕೋಕಾ ಕೋಲಾ, ಪೆಪ್ಸಿ, ಮಿನರಲ್‌ ವಾಟರ್‌ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ತಂಪು ಪಾನೀಯಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾರ್ಚ್ ಒಂದರಿಂದ ತಮಿಳುನಾಡಿನಾದ್ಯಂತ ಮಾರಟ ಸ್ಥಗಿತಗೊಂಡಿದೆ. ಈ ತಂಪು ಪಾನೀಯಗಳು ರಾಸಾಯನಿಕಗಳನ್ನು ಒಳಗೊಂಡದ್ದು, ದೇಹಕ್ಕೆ ಮಾರಕವಷ್ಟೇ ಅಲ್ಲದೆ ಈ ತಂಪುಪಾನೀಯ ತಯಾರಿಕೆಗೆ ಅತೀ ಹೆಚ್ಚು ನೀರು ಬೇಕಾಗಿದ್ದು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ.ಜೊತೆಗೆ  ಭಾರತೀಯ ಬ್ರಾಂಡ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.

ಈ ಕುರಿತು ತಮಿಳುನಾಡಿನಾದ್ಯಂತ ವಿದೇಶಿ ಕಂಪೆನಿಗಳ ತಂಪು ಪಾನೀಯಗಳಿಂದಾಗುವ ತೊಂದರೆಯ ಕುರಿತು ಫೆಬ್ರವರಿ ತಿಂಗಳಿಡೀ ವ್ಯಾಪಾರಿಗಳು ಜನರಲ್ಲಿ ಅರಿವು ಮೂಡಿಸಿದ್ದಾರೆ . ಈ ತಂಪು ಪಾನೀಯಗಳು ರಾಸಾಯನಿಕಗಳನ್ನು ಒಳಗೊಂಡದ್ದು,ದೇಹಕ್ಕೆ ಮಾರಕ ಎಂದು ತಮಿಳುನಾಡು ವಣಿಗರ ಸಂಘಂಗಳಿನ್‌ ಪೆರಮೈಪು ಅಧ್ಯಕ್ಷ ಎ.ಎಂ. ವಿಕ್ರಮಾರ್ಜುನ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ನಿಷೇಧ ತೆರವಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ರಾಜ್ಯದ ನೀರು ಬಳಸಿಕೊಂಡು ತಂಪು ಪಾನೀಯಗಳನ್ನು ತಯಾರಿಸುತ್ತಿದ್ದು, ಅದಕ್ಕೆ ನಿಷೇಧ ಹೇರಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದವು.

loading...

No comments