Breaking News

ಭಾರತೀಯ ಇಂಜಿನಿಯರ್ ಹತ್ಯೆ ಖಂಡಿಸಿದ ಟ್ರಂಪ್


ವಾಷಿಂಗ್ಟನ್ ;ಕಳೆದ ವಾರ ಇತ್ತೀಚೆಗೆ ಕನ್ಸಾಸ್‌ನಲ್ಲಿ ನಡೆದ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕೋಚಿಬೊತ್ಲಾ ಹಲ್ಲೆಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹತ್ಯೆ ಸಂಬಂಧ ಕ್ಷಮೆ ಯಾಚಿಸಿದ್ದಾರೆ.
ಅಮೆರಿಕಾದ ಕನ್ಸಾಸ್‌ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿ ಶ್ರೀನಿವಾಸ್ ಕೋಚಿಬೊತ್ಲಾ ಅವರನ್ನು ಕಳೆದ ವಾರ ಬಾರ್‌ವೊಂದರಲ್ಲಿ ಜನಾಂಗೀಯ ನಿಂದನೆಯ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಿಂದ ಅಮೆರಿಕಾದಲ್ಲಿ ಭಾರತೀಯ ಉದ್ಯೋಗಿಗಳು ಬೆಚ್ಚಿಬಿದ್ದಿದ್ದರು. ಅಲ್ಲದೆ, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಕ್ಷಣೆ ನೀಡುವಂತೆ ಟ್ರಂಪ್ ಆಡಳಿತಕ್ಕೆ ಮನವಿ ಮಾಡಿದ್ದರು.

ಜಗತ್ತಿನಾದ್ಯಂತ ಹತ್ಯೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಇಂತಹ ಘಟನೆಗಳು ಮರುಕಳಿಸದಂತೆ ಅವರು ಹೇಳಿದ್ದಾರೆ.

ಜನಾಂಗೀಯ ನಿಂದನೆ ಹೆಸರಲ್ಲಿ ಹತ್ಯೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಇಂತಹ ಹೇಯಕೃತ್ಯವನ್ನು ಯಾರೇ ಮಾಡಿದರೂ ಅದನ್ನು ಖಂಡಿಸುತ್ತೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
pti

loading...

No comments