ಪ್ರಧಾನಿ ಮೋದಿ ಈ ವರ್ಷ ಇಸ್ರೇಲ್ ಗೆ ಭೇಟಿಯಾಗಲಿದ್ದಾರೆ
ನವದೆಹಲಿ : ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ನೀಡಲಿದ್ದು ದಿನಾಂಕವನ್ನು ಮುಂಬರುವ ದಿನಗಳಲ್ಲಿ ನಿಗದಿ ಪಡಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅಮರ್ ಸಿನ್ಹ ಹೇಳಿದ್ದಾರೆ .
ಭಾರತ ಇಸ್ರೇಲ್ ಜಂಟಿ ಸಹಯೋಗ ಸಮಿತಿಯನ್ನು ರಚಿಸಿ ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಬಾಂಧವ್ಯವನ್ನು ಸುಭದ್ರಗೊಳಿಸಲಾಗುವುದು ಅದಲ್ಲದೆ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷಗಳ ಸ್ಮರಣಾರ್ಥವಾಗಿ ಜಂಟಿ ಸಹಯೋಗ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಅಮರ್ ಸಿನ್ಹಾ ಕಾರ್ಯಕ್ರಮವೊಂದರಲ್ಲಿ ಹೇಳಿದರು .
ಮಿಲಿಟರಿ , ಕೃಷಿ , ಸೇರಿದಂತೆ ಅನೇಕ ರಂಗಗಳಲ್ಲಿ ದ್ವಿಪಕ್ಷೀಯ ಸಂಬಂಧ ಬೆಳೆಸುವಲ್ಲಿ ಭಾರತ ಮತ್ತು ಇಸ್ರೇಲ್ ಮೈಲಿಗಲ್ಲು ಸಾಧಿಸಿದೆ .ಇಸ್ರೇಲ್ ಕೃಷಿ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರ ದಲ್ಲಿ ಅನೇಕ ಬೆಳವಣಿಗೆಗಳು ಆಗಿವೆ ದೇಶದ ಹಲವಾರು ರೈತರು ಇದರ ಲಾಭವನ್ನು ಪಡೆದಿರುತ್ತಾರೆ .ಇನ್ನು ಮುಂದೆಯೂ ಎರಡು ದೇಶಗಳು ಮತ್ತಷ್ಟು ಆಳವಾಗಿ ಬಾಹ್ಯಾಕಾಶ , ಎಸ್ & ಟಿ, ಆರ್ & ಡಿ, ಶಿಕ್ಷಣ, ಡೈರಿ ಕ್ಷೇತ್ರದಲ್ಲಿ ಕೆಲಸ ಮಾಡಲಿದೆ ಎಂದರು .1992 ರಲ್ಲಿ ಭಾರತ ಇಸ್ರೇಲ್ ರಾಜತಾಂತ್ರಿಕ ಒಪ್ಪಂದ ಮಾಡಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಯಹೂದಿ ರಾಷ್ಟ್ರ ಭೇಟಿ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸಲಿದೆ .
-ani
loading...
No comments