ವಿವಾದಾತ್ಮಹ ಹೇಳಿಕೆ ಕ್ಷಮೆಯಾಚಿಸಿದ ಪ್ರತಾಪ್ ಸಿಂಹ
ಮೈಸೂರು : ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆ ಹಿಂಪಡೆದು ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವುದಾಗಿ ಅವರು ಹೇಳಿದ್ದಾರೆ. ಪತಿಯ ಸಾವಿನ ಜೊತೆ ಅಧಿಕಾರದ ಆಸೆಯೂ ಇತ್ತು ಎಂದಷ್ಟೆ ನಾನು ಹೇಳಿದ್ದೆ. ಪತಿ ಸಾವನ್ನಪ್ಪಿ ಮೂರು ದಿನಗಳಲ್ಲಿಯೇ ನಾನೇ ಅಭ್ಯರ್ಥಿ ಎಂದು ಗೀತಾಪ್ರಸಾದ್ ಘೋಷಿಸಿಕೊಂಡಿದ್ದರು. ಅನುಕಂಪದ ಹಿನ್ನೆಲೆಯಲ್ಲಿ ಮತ ಯಾಚಿಸುತ್ತಿದ್ದರು. ನಮ್ಮ ಅಭ್ಯರ್ಥಿಯೂ ಕೂಡ ಎರಡು ಬಾರಿ ಸೋತಿದ್ದಾರೆ. ಅವರ ತಂದೆಯೂ ಕೂಡ ಎರಡು ಬಾರಿ ಸೋತಿದ್ದಾರೆ. ಅಭಿವೃದ್ದಿ ಹಿನ್ನೆಲೆಯಲ್ಲಿ ನಮಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ ಎಂದರು.
loading...
No comments