Breaking News

ಯೋಗಿ ಅವಹೇಳನ ಪ್ರಭಾ ಬೆಲವಂಗಲ ಅವರ ಬಂಧನಕ್ಕೆ ಪ್ರತಾಪ್‌ ಆಗ್ರಹಮೈಸೂರು: ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಲವಂಗಲ ಎಂಬುವವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕುರಿತು ಅವಹೇಳನವಾಗುವಂಥ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಸದ ಪ್ರತಾಪ್‌ಸಿಂಹ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
''ಪ್ರಭಾ ಬೆಲವಂಗಲ ಅವರ ಪೋಸ್ಟ್‌ ಖಂಡನಾರ್ಹ ಮತ್ತು ಶಿಕ್ಷಾರ್ಹ ಅಪರಾಧ. ಕೂಡಲೇ ಅವರನ್ನು ಬಂಧಿಸಬೇಕು,''ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
''ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಕಂಡಿದೆ. ಯೋಗಿ ಆದಿತ್ಯನಾಥ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಹೀಗಿರುವಾಗ ಪ್ರಭಾ ಬೆಲವಂಗಲರವರು, ಒಬ್ಬ ಮಹಿಳೆಯೊಂದಿಗೆ ಇರುವ ವೀಡಿಯೋಗೆ ಯೋಗಿ ಆದಿತ್ಯನಾಥ್‌ರವರ ಮುಖವಾಡ ಹಾಕಿ ಅವಹೇಳನಕಾರಿ ಪೋಸ್ಟ್‌ ಮಾಡಿರುವುದು ಎಷ್ಟು ಸರಿ. ಇಂತಹವರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಜ್ಯದ ಎಲ್ಲ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು,'' ಎಂದು ಹೇಳಿದರು.
''ಪ್ರಭಾ ಅವರು ಮುಖ್ಯಮಂತ್ರಿಗಳ ಜತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿ ಮುಖ್ಯಮಂತ್ರಿಗಳೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯಧರ್ಮ ಪಾಲಿಸಬೇಕು. ಇಲ್ಲದಿದ್ದರೆ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು,'' ಎಂದು ಎಚ್ಚರಿಕೆ ನೀಡಿದರು.

loading...

No comments