ಘಾಝಿಯಾಬಾದ್ ಅಲಿಘರ್ ಅಕ್ರಮ ಕಸಾಯಿ ಖಾನೆಗಳಿಗೆ ಬೀಗ ಜಡಿದ ಪೊಲೀಸರು
ಯೋಗಿ ಎಫೆಕ್ಟ್
15 ಕ್ಕೂ ಹೆಚ್ಚು ಅಕ್ರಮ ಕಸಾಯಿ ಖಾನೆಗಳಿಗೆ ಬೀಗ
ಉತ್ತರಪ್ರದೇಶ : ಘಾಝಿಯಾಬಾದ್ ಅಲಿಘರ್ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ 15 ಕ್ಕೂ ಹೆಚ್ಚು ಅಕ್ರಮ ಕಸಾಯಿ ಖಾನೆಗಳಿಗೆ ಬೀಗ ಜಡಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಗಳು ನಡೆದಿದೆ .
ಯೋಗಿ ಆದಿತ್ಯನಾಥ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಲ್ಲಿ ಘಾಝಿಯಾಬಾದ್ನ ಎರಡು ಅಕ್ರಮ ಕಸಾಯಿ ಖಾನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಬೀಗ ಜಡಿದಿದ್ದಾರೆ .ಈ ಕಸಾಯಿ ಖಾನೆಯಲ್ಲಿ ಜಾನುವಾರುಗಳನ್ನು ಬಹಳ ಮೃಗೀಯ ರೀತಿಯಲ್ಲಿ ಹಿಂಸಿಸಿ ಕೊಲ್ಲುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ಬಂದ ವರದಿಗಳ ಪ್ರಕಾರ ಅಲಿಘರ್ ನಲ್ಲೂ ಕೂಡ ಪೊಲೀಸರು ಅಕ್ರಮ ಕಸಾಯಿ ಖಾನ್ ಮೇಲೆ ದಾಳಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ
loading...
No comments