ಸಂಸದರ ಗೈರುಹಾಜರಾತಿ ಮೋದಿ ಅಸಮಾಧಾನ
ನವದೆಹಲಿ : ಸಂಸದರ ಕಡಿಮೆ ಹಾಜರಾತಿ ಮತ್ತು ನಿಧಾನಗತಿಯ ಕೆಲಸಕ್ಕಾಗಿ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗಬೇಕಾದರೂ ನಿಮ್ಮನ್ನು ಕರೆಯಬಹುದು. ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ ಎಂದು ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಂಸತ್ತನ್ನು ಒಂದು ದಿನವೂ ಕೂಡಾ ತಪ್ಪಿಸಿಕೊಳ್ಳುವಂತಿಲ್ಲ. ಸಂಸತ್ ನಲ್ಲಿ ಭಾಗವಹಿಸುವುದು ಸಂಸದರ ಮೂಲಭೂತ ಜವಾಬ್ದಾರಿ. ಅದನ್ನು ವಿನಂತಿ ಮಾಡಿಸಿಕೊಳ್ಳಬಾರದು. ಅವರವರ ಕ್ಷೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಪ್ರಧಾನಿ ಮೋದಿ ಇಂದು ನಡೆದ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ.
loading...
No comments