Breaking News

ಭ್ರಷ್ಟ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಕಾಂಗ್ರೆಸ್‍ ಅನ್ನು ಸೇರಿಸಿರುವುದು ಪಾಕ್ ಮೂಲದ ವೆಬ್‍ಸೈಟ್ ?


ನವದೆಹಲಿ: 'ಜಗತ್ತಿನಲ್ಲಿರುವ ಹತ್ತು ಭ್ರಷ್ಟ ರಾಜಕೀಯ ಪಕ್ಷಗಳ ಪಟ್ಟಿ' ಎಂಬ ಸಂದೇಶವೊಂದು ಕೆಲವು ದಿನಗಳಿಂದ  ಭಾರಿ ಸುದ್ದಿ ಮಾಡುತ್ತಿದೆ. ಬಿಬಿಸಿ ಪ್ರಕಟ ಮಾಡಿದ ಪಟ್ಟಿ ಎಂದು ಹೇಳಲಾಗಿರುವ ಈ ಪಟ್ಟಿಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 4 ಸ್ಥಾನದಲ್ಲಿದೆ ಎಂಬ ಸಂದೇಶವು ಹರಿದಾಡುತ್ತಿದೆ.

ಆದರೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬಿಬಿಸಿ ಅಲ್ಲ, ಬಿಬಿಸಿ ನ್ಯೂಸ್ ಪಾಯಿಂಟ್!


ಬಿಬಿಸಿ ನ್ಯೂಸ್ ಪಾಯಿಂಟ್ ಎಂಬ ವೆಬ್‍ಸೈಟ್‍ನಲ್ಲಿ ಹೀಗೊಂದು ಪಟ್ಟಿ ಪ್ರಕಟವಾಗಿದ್ದು, ಈ ಪಟ್ಟಿಯನ್ನು ಬಿಬಿಸಿ ಪ್ರಕಟ ಮಾಡಿದೆ ಎಂಬ ಹೆಸರಿನಲ್ಲಿ ಸಂದೇಶ ಹರಿದಾಡುತ್ತಿದೆ. ಅಂದಹಾಗೆ ಬಿಬಿಸಿ ನ್ಯೂಸ್ ಪಾಯಿಂಟ್ ವೆಬ್‍ಸೈಟ್‍ಗೂ  ಬಿಬಿಸಿ ಸುದ್ದಿ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸಂದೇಶದ ಬಗ್ಗೆ opindia ಡಾಟ್ ಕಾಂ ನಡೆಸಿದ ತನಿಖೆ 'ಬಿಬಿಸಿ ನ್ಯೂಸ್ ಪಾಯಿಂಟ್ ಎಂಬ ವೆಬ್‍ಸೈಟ್  ಪಾಕಿಸ್ತಾನ ಮೂಲದ್ದು' ಎಂದು ಹೇಳಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರ ಪಕ್ಷವೂ ಈ ಪಟ್ಟಿಯಲ್ಲಿದೆ. ಹಾಗಾಗಿ ಪಾಕಿಸ್ತಾನದಲ್ಲಿನ ನೆಟಿಜನ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸುದ್ದಿಯನ್ನು ಶೇರ್ ಮಾಡಿದ್ದರು. ಅಂದಹಾಗೆ ಪಾಕಿಸ್ತಾನದಲ್ಲಿ ಈ ಸುದ್ದಿಯನ್ನು ಶೇರ್ ಮಾಡಿದವರಲ್ಲಿ ಹೆಚ್ಚಿನವರು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಅವರ ಬೆಂಬಲಿಗರಾಗಿದ್ದಾರೆ. ಇಮ್ರಾನ್ ಖಾನ್  ಅವರ ಪಕ್ಷ ಉತ್ತಮ ಎಂದು ತೋರಿಸುವುದಕ್ಕಾಗಿಯೇ ಈ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಹೇಳಲಾಗಿದೆ
-prajavani

loading...

No comments