ಪ್ರೊ.ಎಚ್.ಎಲ್. ಕೇಶವವಮೂರ್ತಿ ನಿಧನ
ಮಂಡ್ಯ : ವೈಚಾರಿಕ ರಾಜಕೀಯ ವಿಡಂಬಣೆಗಳಿಗೆ ಪ್ರಸಿದ್ಧರಾಗಿದ್ದ ಸಾಹಿತಿ ಪ್ರೊ.ಎಚ್.ಎಲ್. ಕೇಶವವಮೂರ್ತಿ (೭೮) ಗುರುವಾರ ರಾತ್ರಿ ಮಂಡ್ಯದಲ್ಲಿ ನಿಧನರಾದರು.
ಇವರು ಪತ್ನಿ ಜಯವಾಣಿ, ಭಾವ ಮಾಜಿ ಶಾಸಕ ಜಿ.ಬಿ. ಶಿವಕುಮಾರ್ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಪುತ್ರ ಪ್ರವೀಣ್ ಕಳೆದ 15 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಪತ್ರಕರ್ತ ಪಿ. ಲಂಕೇಶ್ ಗರಡಿಯಲ್ಲಿ ಪಳಗಿದ ಎಚ್‌ಎಲ್‌ಕೆ ಎಂದೇ ಪ್ರಸಿದ್ಧರಾಗಿದ್ದ ಕೇಶವಮೂರ್ತಿ ಕಳೆದ ಹಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮಿಮ್ಸ್ ನ ತುರ್ತುನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ
loading...
No comments