Breaking News

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ Z + ಸೆಕ್ಯೂರಿಟಿ




ನವದೆಹಲಿ : ಉತ್ತರ ಪ್ರದೇಶ ನೂತನ ಮುಖ್ಯ  ಮಂತ್ರಿಯಾಗಿ ಆಯ್ಕೆಗೊಂಡ ಯೋಗಿ ಆದಿತ್ಯನಾಥ್ ಅವರಿಗೆ  'ಝಡ್' ವರ್ಗದ ಭದ್ರತೆಯನ್ನು ಗುರುವಾರ ಕೇಂದ್ರ ಗೃಹ ಸಚಿವಾಲಯ ಓದಗಿಸಿದೆ . ಕೇಂದ್ರ ಅರೆಸೇನಾ ಕಮಾಂಡೊಗಳು ಯೋಗಿ ಆದಿತ್ಯನಾಥ್ ಅವರಿಗೆ ಭದ್ರತೆ ಒದಗಿಸಲಿದ್ದಾರೆ .

ಮೂಲಗಳ ಪ್ರಕಾರ 24 ಶಸ್ತ್ರ ಸಜ್ಜಿತ ಕಮಾಂಡೋಗಳು ಸುತ್ತುವರಿದು ಭದ್ರತೆ ನೀಡಲಿದ್ದಾರೆ. ಝಡ್' ಪ್ಲಸ್ ಕವರ್ ಭಾಗವಾಗಿ ವಿಶೇಷ ಸೆಕ್ಯುರಿಟಿ ಗ್ರುಪ್ (SSG) ಮತ್ತು ಪೊಲೀಸ್ ಅಧಿಕಾರಿಗಳು ಈ ತಂಡದಲ್ಲಿ ಇದ್ದಾರೆ .
ಈ ಹಿಂದೆ ಯೋಗಿ ಆದಿತ್ಯನಾಥ್ ಅವರಿಗೆ 'ವೈ' ವರ್ಗದ ಭದ್ರತೆ ನೀಡಲಾಗಿತ್ತು ಈ ಭದ್ರತೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳು ಯೋಗಿ ಅವರಿಗೆ ಭದ್ರತೆ ನೀಡುತಿದ್ದರು


loading...

No comments