Breaking News

ಫ್ಲಿಪ್ ಕಾರ್ಟ್ ಸ್ಥಾಪಕರಾದ ಬನ್ಸ್ಸಾಲ್ ಅವರನ್ನು ಹಿಂದಿಕ್ಕಿದ ಪತಾಂಜಲಿ ರಾಮದೇವ್


ಮುಂಬೈ : ಖ್ಯಾತ ಇ-ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಸ್ಥಾಪಕರಾದ ಸಚಿನ್ ಹಾಗೂ ಬಿನ್ನಿ ಬನ್ಸಾಲ್ ಕಳೆದ ವರ್ಷ ಬಿಲಿಯಾಧಿತಿಪತಿಗಳು ಎಂಬ ಹೆಗ್ಗಳಿಕೆ ಗಳಿಸಿದ್ದರೂ ಅವರ ಸಂಸ್ಥೆಯ ಮೌಲ್ಯೀಕರಣದಲ್ಲಿ ಉಂಟಾದ ಕುಸಿತದಿಂದಾಗಿ ಹುರುನ್ ಗ್ಲೋಬಲ್ ರಿಚ್-ಇಂಡಿಯನ್ ಬಿಲಿಯನೇರ್ಸ್ ರಿಪೋರ್ಟ್ ಇದರಿಂದ ಹೊರಬಿದ್ದಿರುವ 31 ಭಾರತೀಯ ಬಿಲಿಯಾಧಿಪತಿಗಳಲ್ಲಿ ಅವರಿಬ್ಬರೂ ಸೇರಿದ್ದಾರೆ.
ಈ 31 ಮಂದಿಯಲ್ಲಿ 11 ಮಂದಿ ತಮ್ಮ ಬಿಲಿಯಾಧಿಪತಿ ಸ್ಥಾನಮಾನವನ್ನು ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದ ನಂತರ ಕಳೆದುಕೊಂಡಿದ್ದಾರೆ. ಇವರಲ್ಲಿ ಪ್ರಮುಖರೆಂದರೆ ಕ್ರಾಂಪ್ಟನ್ ಗ್ರೀವ್ಸ್ ಕಂಪೆನಿಯ ಗೌತಮ್ ಥಾಪರ್, ಡಿವಿಸ್ ಲ್ಯಾಬ್ಸ್ ಮಾಲಕಿಯಾದ ನೀಲಿಮಾ ಮೊಟಪರ್ತಿ, ಅಪೋಲೋ ಆಸ್ಪತ್ರೆಯ ಪ್ರತಾಪ್ ಸಿ ರೆಡ್ಡಿ ಹಾಗೂ ಇನ್ಫೋಸಿಸ್ ಷೇರುದಾರರಾಗಿರುವ ನಂದನ್ ನೀಲೇಕಣಿ. ನೋಟು ಅಮಾನ್ಯೀಕರಣದ ನಂತರದ ಕಂಪೆನಿಗಳ ಷೇರು ಮೌಲ್ಯದ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ.
ಅದೇ ಸಮಯ ಬಿಲಿಯಾಧಿಪತಿಗಳ ಪಟ್ಟಿಗೆ ಈ ವರ್ಷ 27 ಮಂದಿಯ ಸೇರ್ಪಡೆಯಾಗಿದ್ದು 3.6 ಬಿಲಿಯನ್ ಆಸ್ತಿ ಹೊಂದಿರುವ ಪತಂಜಲಿ ಆರ್ಯುವೇದದ ರಾಮದೇವ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ನಂತರದ ಸ್ಥಾನ ನಾದಿರ್ ಬಿ ಗೋದ್ರೇಜ್ ಹಾಗೂ ಸ್ಮಿತಾ ವಿ ಕೃಷ್ಣ ಅವರಿಗೆ ಹೋಗಿದೆ. ತಮ್ಮ 1.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಪೇಟಿಎಂ ಸ್ಥಾಪಕ ವಿಜಯ್ ಶಂಕರ್ ಶರ್ಮ ಕೂಡ ಈ ಪಟ್ಟಿಯಲ್ಲಿದ್ದಾರೆ.

loading...

No comments