Breaking News

ಜೈಲಿನಿಂದ ಪರಾರಿಯಾಗಿದ್ದ ಕೈದಿ ಸೆರೆ
ಮಂಗಳೂರು: ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಜಿನ್ನಪ್ಪ ಪರವನನ್ನು ನಿನ್ನೆ ಸುಳ್ಯದ ದೇವಚಳ್ಳ ಗ್ರಾಮದ ಕಂದ್ರ ಕಂದ್ರಪ್ಪಾಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಬರ್ಕೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಂದ ಬಂಧಿತನಾಗಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ಬೆಳ್ತಂಗಡಿಯ ಗರ್ಡಾಡಿ ಬೋಳ್ಕಲ್ಲುಗುಡ್ಡದ ಜಿನ್ನಪ್ಪ ಪರವ (೪೩) ಮಾ.೧೦ರಂದು ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ. ಈ ಕುರಿತು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ ನಾಲ್ಕು ದಿನದಿಂದ ಪೊಲೀಸರು ಈತನಿಗಾಗಿ ವ್ಯಾಪಕ ಹುಡುಕಾಟ ನಡೆಸಿದ್ದರು. ಎರಡು ದಿನಗಳ ಕಾಲ ವಿವಿಧ ಕಡೆಗಳಲ್ಲಿ ಸುತ್ತಾಡಿದ್ದ ಜಿನ್ನಪ್ಪ ಮಾ.೧೨ರಂದು ಕಂದ್ರಪ್ಪಾಡಿಯ ಸಂಬಂಧಿಕರ ಮನೆಗೆ ಬಂದಿದ್ದ. ಕಂದ್ರಪ್ಪಾಡಿಯಲ್ಲಿ ನಡೆಯುವ ನೇಮೋತ್ಸವದ ಕೆಲಸದಲ್ಲಿ ನಿರತನಾಗಿದ್ದ. ಈತನನ್ನು ಖಚಿತ ಮಾಹಿತಿಯ ಮೇರೆಗೆ ಸುಳ್ಯ ಠಾಣೆಯ ಎಸ್.ಐ ಹೆಚ್.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಎಎಸ್‌ಐ ಕೃಷ್ಣಯ್ಯ.ಕೆ, ಸಿಬ್ಬಂದಿ ಸುಚಿನ್, ಪುನೀತ್‌ಕುಮಾರ್, ಅಶೋಕ್‌ಕುಮಾರ್ ಕಾರ್ಯಾಚರಣೆ ನಡೆಸಿ ಮಂಗಳವಾರ ಹಗಲು ವಶಕ್ಕೆ ಪಡೆದುಕೊಂಡಿದ್ದಾರೆ.

loading...

No comments