Breaking News

ದೇಶದ್ರೋಹದ ಆರೋಪ ಹೊತ್ತಿರುವ ಕನ್ನೈಯಾ ಕುಮಾರ್ ಇನ್ನೂ ನಿರಪರಾಧಿ ಎಂದು ಸಾಬೀತಾಗಿಲ್ಲ - ದೆಹಲಿ ಪೋಲೀಸ್

ನವದೆಹಲಿ : ದೇಶದ್ರೋಹದ ಆರೋಪ ಹೊತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕನ್ನೈಯಾ ಕುಮಾರ್ ಇನ್ನೂ ನಿರಪರಾಧಿ ಎಂದು ಸಾಬೀತಾಗಿಲ್ಲ, ತನಿಖೆ ಇನ್ನೂ ಮುಂದುವರೆದಿದೆ ಎಂದು ದೆಹಲಿ ಪೋಲೀಸರು ಹೇಳಿದ್ದಾರೆ.ಮಾಧ್ಯಮಗಳಲ್ಲಿ ಕನ್ನೈಯಾ ಕುಮಾರ್ ದೋಷಮುಕ್ತನಾಗಿದ್ದಾನೆ ಎಂದು ವರದಿಗಳು ಪ್ರಕಟವಾದ ಕಾರಣ ದೆಹಲಿ ಪೋಲೀಸರು ಈ ಸ್ಪಷ್ಟನೆ ನೀಡಿದ್ದಾರೆ.

ದೇಶದ್ರೋಹದ ಘೋಷಣೆ ಕೂಗಿದವರಲ್ಲಿ ಕನ್ನೈಯಾ ಇರಲಿಲ್ಲ, ಕನ್ನೈಯ್ಯನ ಧ್ವನಿಮಾದರಿ ಪರೀಕ್ಷಿಸಿದಾಗ ಇದು ಸಾಬೀತಾಗಿದೆ. ಅಲ್ಲದೆ ಆತ ಆ ಸಮಯದಲ್ಲಿ ಅಲ್ಲಿ ಇರಲೇ ಇಲ್ಲ.ಹೀಗಾಗಿ ದೇಶದ್ರೋಹದ ಆರೋಪದಿಂದ ಮುಕ್ತನಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ ದೆಹಲಿ ಪೋಲೀಸ್ ವಿಶೇಷ ಘಟಕದ ಉಪಾಯುಕ್ತ ಪ್ರಮೋದ ಸಿಂಗ್ ಕುಶವಾ, ಕನ್ನೈಯಾ ಮೇಲಿರುವ ದೇಶದ್ರೋಹ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಆರೋಪಪಟ್ಟಿಯೇ ಸಿದ್ದಗೊಂಡಿಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಜವಾಹರಲಾಲ ನೆಹರೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪಾರ್ಲಿಮೆಂಟ್ ದಾಳಿ ರುವಾರಿ ಅಪ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದ್ದರ ವಿರುದ್ಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಪ್ರಕರಣದಲ್ಲಿ ವಿದ್ಯಾರ್ಥಿಗಳಾದ ಕನ್ನೈಯ ಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.
loading...

No comments