Breaking News

ಮಾವನಿಂದ ಲೈಂಗಿಕ ಕಿರುಕುಳ, ಅಡ್ಜಸ್ಟ್ ಮಾಡ್ಕೋ ಎಂದ ಪತಿರಾಯ.

ಬೆಂಗಳೂರು : ತಂದೆಗೆ ಸಮಾನವಾದ ಮಾವನೊಬ್ಬ ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ಶೃತಿ ಮಾವನಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ ಯುವತಿ. ಈ ಸಂಬಂಧ ನೊಂದ ಯುವತಿ ಬೆಂಗಳೂರಿನ ಬಸವನಗುಡಿ ಮಹಿಳಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
2016ರಂದು ಶೃತಿ ವಿವಾಹ ರಘುನಂದನ್ ಜೊತೆ ಆಗಿತ್ತು ನಂತರ ಗಂಡ ರಘುನಂದನ್ ಅಮೇರಿಕಾ ತೆರಳಿದ್ದ. ಸ್ವಲ್ಪ ಸಮಯಾ ನಂತರ ಶೃತಿ, ಅತ್ತೆ ಮಾವನ ಜೊತೆ ಅಮೇರಿಕಾಗೆ ತೆರಳಿದ್ದಳು. ಅಮೇರಿಕಾದಲ್ಲಿ ಗಂಡನ ಸಮ್ಮುಖದಲ್ಲೇ ಮಾವ ತನ್ನ ಮೈಮುಟ್ಟಿ ಮಾತನಾಡಿಸುತ್ತಿದ್ದ, ಜೊತೆಗೆ ಲೈಂಗಿಕ ಕಿರುಕುಳ ಕೊಡ್ತಾ ಇದ್ದ. ಈ ಬಗ್ಗೆ ಗಂಡನಿಗೆ, ಅತ್ತೆಗೆ ತಿಳಿಸಿದರೆ ಅಡ್ಜಸ್ಟ್ ಮಾಡ್ಕೋ ಎಂಬ ಉತ್ತರ ನೀಡುತ್ತಿದ್ದರು.
ಮಾವನ ವರ್ತನೆಯಿಂದ ಬೇಸತ್ತ ಯುವತಿ ಅಮೇರಿಕಾದಿಂದ ವಾಪಾಸಾಗಿದ್ದು ಗಂಡ ರಘುನಂದನ್, ಅತ್ತೆ ಉಷಾ ಹಾಗೂ ಮಾವ ವೆಂಕಟಪತಿ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲಿಸಿದ್ದು, ಬಸವನಗುಡಿ ಪೋಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
loading...

No comments