Breaking News

ತಾಲೀಬಾನ್ ಉಗ್ರರ ಧಾಳಿಗೆ ತತ್ತರಿಸಿದ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರ, ಅಪಾರ ಸಾವು ನೋವು.

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಸರಣಿ ಉಗ್ರ ಧಾಳಿಗಳಲ್ಲಿ 16ಜನ ಮೃತಪಟ್ಟರೆ 44ಜನ ಗಂಭೀರ ಗಾಯಗೊಂಡಿದ್ದಾರೆ. ಧಾಳಿಯ ಹೊಣೆಯನ್ನು ತಾಲೀಬಾನ್ ಉಗ್ರರು ಹೊತ್ತುಕೊಂಡಿದ್ದಾರೆ. ಕಾಬೂಲ್ ನಲ್ಲಿರುವ ಪೋಲೀಸ್ ಠಾಣೆ, ಗುಪ್ತಚರ ಇಲಾಖೆ ಕಛೇರಿ ಹಾಗೂ ಸೇನಾ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿ ಉಗ್ರ ಧಾಳಿ ನಡೆದಿದೆ. 
ಮೊದಲು ಮಿಲಿಟರಿ ತರಬೇತಿ ಶಾಲೆ ಸಮೀಪ ಪೊಲೀಸ್ ಕೇಂದ್ರ ಕಚೇರಿ ಬಳಿ ಕಾರ್ ಬಾಂಬ್‍ ಸ್ಪೋಟಿಸಿದ ಉಗ್ರರು , ನಂತರ ಪೋಲೀಸರು ಮತ್ತು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸರು-ಯೋಧರು ಮತ್ತು ತಾಲೀಬಾನ್ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಉಗ್ರರ ಧಾಳಿಯಲ್ಲಿ 16ಜನ ಮೃತಪಟ್ಟರೆ 44ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಗ್ಯ ಇಲಾಖೆಯ ವಕ್ತಾರ ವಹೀದ್ ಮಜ್ರೋ ಹೇಳಿದ್ದಾರೆ.
loading...

No comments