Breaking News

ನನ್ನ ಪತಿಯ ಕನಸನ್ನು ನನಸು ಮಾಡಲು ಮುಂದಿನ ಉಪಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ.

ಚಾಮರಾಜನಗರ : 5 ಬಾರಿ ಶಾಸಕರಾಗಿ ಆಯ್ಕೆ ಸಿದ್ದರಾಮಯ್ಯರ ಪರಮಾಪ್ತ ಸೋಲಿಲ್ಲದ ಸರದಾರ, ಸಜ್ಜನ ರಾಜಕಾರಣಿಯಾಗಿದ್ದ ಸಹಕಾರ, ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ವಿಧಿವಶರಾಗಿದ್ದು ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಈಗ ಅವರ ಪತ್ನಿ ಗೀತಾ ಮಹಾದೇವಪ್ರಸಾದ್ ರಾಜಕಾರಣಕ್ಕೆ ಕಾಲಿಡುತ್ತಿದ್ದಾರೆ. ಮುಂದಿನ ಉಪ ಚುಣಾವಣೆಯಲ್ಲಿ ಗೀತಾ ಮಹಾದೇವಪ್ರಸಾದ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬರಗಿ, ಬೇಗೂರು, ಹಂಗಳ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಗ್ರಾಮೀಣ ಭಾಗದ ಮತದಾರರಲ್ಲಿ ಮತಯಾಚನೆ ನಡೆಸಿದ ನಂತರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಭಿವೃದ್ದಿಯೇ ಮೂಲಮಂತ್ರವಾಗಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಪತಿಯ ಕನಸನ್ನು ನನಸು ಮಾಡಲು ಮುಂದಿನ ಉಪಚುನಾವಣೆಯಲ್ಲಿ ತಮಗೆ ಹೆಚ್ಚಿನ ಮತ ನೀಡಿ ಎಂದು ಗೀತಾ ಮಹದೇವಪ್ರಸಾದ್ ಮನವಿ ಮಾಡಿದರು. ಜಾರಿ ಮಾಡಿರುವ ಯೋಜನೆಗಳು ಹಾಗೂ ಕ್ಷೇತ್ರದಲ್ಲಿ ನನ್ನ ಪತಿ ಎಚ್.ಎಸ್.ಮಹದೇವಪ್ರಸಾದ್ ಅವರು ಕಳೆದ 25 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಉಪಚುನಾವಣೆಯಲ್ಲಿ ನನಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಹಲವು ಹಿರಿಯರು ನನ್ನನ್ನು ರಾಜಕೀಯಕ್ಕೆ ಇಳಿಯುವಂತೆ ಸಲಹೆ ನೀಡಿದ್ದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಕಾಂಗ್ರೆಸ್‍ನಿಂದ ಚುನಾವಣೆ ಎದುರಿಸಲು ಮುಂದಾಗಿದ್ದೇನೆ. ಇದರ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ ಎಂದು ತಿಳಿಸಿದರು.
loading...

No comments