Breaking News

ಬೆಂಗಳೂರು ಶಾಸಕರಿಗೆ ಬೇಡವಾದ ಸ್ಟೀಲ್ ಬ್ರಿಜ್ ನಮಗೂ ಬೇಡ : ಸಿದ್ದರಾಮಯ್ಯ


ಭ್ರಷ್ಟಾಚಾರ ಆರೋಪ ಹಿನ್ನಲೆ  ಸ್ಟೀಲ್ ಬ್ರಿಜ್ ರದ್ದು ತೀರ್ಮಾನ

ಬೆಂಗಳೂರು:  ಗುರುವಾರ ವಿಧಾನ ಸೌಧದಲ್ಲಿ  ನಡೆದ ಮಹತ್ವದ ಸಭೆಯಲ್ಲಿ ಉಕ್ಕಿನ ಸೇತುವೆ ಕುರಿತು ಭಾರಿ ವಾಗ್ವಾದ ನಡೆದು, ಸ್ಟೀಲ್ ಬ್ರಿಜ್ ಯೋಜನೆ ಕೈಬಿಡುವ ಬಗ್ಗೆ ಸಚಿವರು, ಶಾಸಕರು ತೀರ್ಮಾನ ಕೈಗೊಂಡಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ನೇತೃತ್ವದಲ್ಲಿ ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಿತು. 'ದಿನ ಬೆಳಗೆದ್ದು ಸ್ಟೀಲ್ ಫ್ಲೈಓವರ್ ಕುರಿತ ಭ್ರಷ್ಟಾಚಾರ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ, ಇದು ಕಾಂಗ್ರೆಸ್ ಪಕ್ಷಕ್ಕೂ ಕೆಟ್ಟ ಹೆಸರು ತರುತ್ತಿದೆ. ಇದೊಂದು ಭ್ರಷ್ಟಾಚಾರ ಸ್ಮಾರಕವಾಗಿ ಉಳಿಯುವ ಆತಂಕವೂ ಇದೆ. ಹೀಗಾಗಿ ಸ್ಟೀಲ್ ಬ್ರಿಜ್ ಯೋಜನೆ ಕೈಬಿಡುವುದು ಉತ್ತಮ' ಎಂದು ಸಚಿವ ಜಾರ್ಜ್ ಅವರು ಸಭೆಯಲ್ಲಿ ಹೇಳಿದರೆನ್ನಲಾಗಿದೆ.

ಅಲ್ಲದೆ, 'ಸಭೆಯಲ್ಲಿ ಎಲ್ಲರೂ ಒಪ್ಪುವುದಿದ್ದರೆ ಈ ಯೋಜನೆ ಕೈಬಿಡುತ್ತೇವೆ, ಇದಕ್ಕೆ ಮುಖ್ಯಮಂತ್ರಿ ಅವರನ್ನೂ ಒಪ್ಪಿಸುತ್ತೇವೆ, ಆದರೆ ಆರೋಪಗಳನ್ನು ಸಹಿಸುವುದಿಲ್ಲ' ಎಂದು ಜಾರ್ಜ್ ಹೇಳಿದರು.ನಂತರದ ಬೆಳವಣಿಗೆಯಲ್ಲಿ
ಸಚಿವ ಜಾರ್ಜ್ ದೂರವಾಣಿ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಲ್ಲಿ ಚರ್ಚಿಸಿದ್ದು ,ಇದೀಗ ಬೆಂಗಳೂರು ಶಾಸಕರಿಗೆ ಬೇಡವಾದ  ಸ್ಟೀಲ್ ಬ್ರಿಜ್ ನಮಗೂ ಬೇಡ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ  ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಕನಸಿನ ಕೂಸು ಆದ ಸ್ಟೀಲ್ ಬ್ರಿಜ್ ಯೋಜನೆಯನ್ನು ಕೈಬಿಡುವುದು ಖಚಿತವಾಗಿದೆ


loading...

No comments