Breaking News

ಛಾಯಾಗ್ರಾಹಕನ ಮೇಲೆ ಕಾರು ಹತ್ತಿಸಿದ ಶಾರುಖ್ ಖಾನ್ ?


ಬಾಲಿವುಡ್ ನಟ ಶಾರೂಖ್ ಖಾನ್ ಅಲಿಯಾಭಟ್‌ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋದಾಗ ಅವರಿದ್ದ ಕಾರು ಫೋಟೋಗ್ರಾಫರ್‌ ಕಾಲ ಮೇಲೆ ಹರಿದಿದೆ. ಪರಿಣಾಮ ಫೋಟೋಗ್ರಾಫರ್ ಗಾಯಗೊಂಡಿದ್ದಾರೆ.‌ ಫೊಟೋ ಕ್ಲಿಕ್ಕಿಸುವ ಬರದಲ್ಲಿದ ಫೋಟೋಗ್ರಾಫರ್‌ ಕಾಲು ಶಾರೂಖ್‌ ಕಾರಿನ ಚಕ್ರದಡಿ ಸಿಲುಕಿದೆ.
ಅದನ್ನು ಗಮನಿಸಿದ ಶಾರೂಖ್, ತಕ್ಷಣ ತನ್ನ ಸಹಚರರನ್ನು (ಬಾಡಿಗಾರ್ಡ್) ರನ್ನು ಕರೆಸಿ ಗಾಯಗೊಂಡಿರುವ ಛಾಯಗ್ರಾಹಕನನ್ನು ಸ್ಥಳೀಯ ನಾನಾವತಿ ಆಸ್ಪತ್ರೆಗೆ ದಾಲಿಸುವಂತೆ ಸೂಚಿಸಿದರು. ಕಾರಿನಿಂದ ಕೆಳಗೆ ಇಳಿದು   ಛಾಯಗ್ರಾಹಕನ ‌ ಬಳಿ ಬಂದ ಶಾರೂಖ್‌, ಆತನಿಗೆ ಧೈರ್ಯ ತುಂಬಿ ಇಡೀ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು‌ ವರದಿಯಾಗಿದೆ..


loading...

No comments