ಐಸಿಐಸಿಐ ಬ್ಯಾಂಕ್ ಎಟಿಎಂ ಪುಡಿಗಟ್ಟಿ ಲಕ್ಷಾಂತರ ರೂ ಕಳವು
ಶಿರಸಿ : ಸೋಮವಾರ ನಸುಕಿನಲ್ಲಿ ಇಲ್ಲಿನ ಯಲ್ಲಾಪುರ ರಸ್ತೆಯ ಹೊಸಪೇಟೆ ಸರ್ಕಲ್ ಬಳಿ ಇರುವ ಐಸಿಐಸಿಐ ಬ್ಯಾಂಕಿನ ಕೆಳಗೆ ಇರುವ ಎಟಿಎಂ ಬಾಗಿಲು ತೆರೆದು ಒಳಗಿದ್ದ ಎಟಿಎಂ ಒಡೆದು 13.80 ಲಕ್ಷ ರೂ ಮೀರಿ ನಗದು ಕಳವು ಮಾಡಲಾಗಿದೆ. ಇದರ ಜತೆಗೆ ಕೆನರಾ ಬ್ಯಾಂಕಿನ 2 ಶಾಖೆಯ ಎಟಿಎಂ ಬಾಗಿಲು ತೆರೆಯುವ ಪ್ರಯತ್ನ ನಡೆದಿದೆ. ಜಿಲ್ಲೆಯ ಇತಿಹಾಸದಲ್ಲಿ ಇದು ಪ್ರಥಮ ಎಟಿಎಂ ಕಳ್ಳತನ ಎನ್ನಲಾಗಿದೆ.
ಹೊಸಪೇಟೆ ರಸ್ತೆಯ ಬೆಳ್ಳಿಮನೆಯ ಸಂಕೀರ್ಣದ ಪ್ರಥಮ ಅಂತಸ್ತಿನಲ್ಲಿರುವ ಐಸಿಐಸಿಐ ಬ್ಯಾಂಕಿನ ಎದುರು ವಾಚಮೆನ್ ಬ್ಯಾಂಕಿನಲ್ಲಿ ಮಲಗಿದ್ದು, ಅದರ ಕೆಳಗೆ ರಸ್ತೆ ಬದಿ ಇರುವ ಎಟಿಎಂಗೆ ರವಿವಾರ ಮಧ್ಯರಾತ್ರಿ ಸುಮಾರು 2.10 ನಿಮಿಷದ ನಂತರ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 13.80 ಲಕ್ಷ ರೂ ಮೀರಿ ಹಣ ಒಯ್ದಿದ್ದಾರೆ. ಒಂದು ಮಾಹಿತಿ ಪ್ರಕಾರ 45 ನಿಮಿಷದಿಂದ 1 ತಾಸು ಕಾಲ ಕಳ್ಳರು ಇಲ್ಲೇ ಇದ್ದರೆಂದು ಹೇಳಲಾಗುತ್ತಿದೆ. ವಾಹನದಲ್ಲಿ ಬಂದ ಬಗ್ಗೆ ಸೀಸಿ ಟೀವಿಯಲ್ಲಿ ದಾಖಲಾಗಿದೆ. ಇಬ್ಬರಕ್ಕಿಂತ ಹೆಚ್ಚು ಭಾಗವಹಿಸಿರುವ ಸಾಧ್ಯತೆ ಇದೆ.
ಬ್ಯಾಂಕಿನ ಸೀಸಿ ಟೀವಿ ಹಾಗೂ ರಸ್ತೆ ಇನ್ನೊಂದು ಬದಿ ಇರುವ ಎರಡು ಬ್ಯಾಂಕುಗಳ ಸೀಸಿ ಟೀವಿಯಲ್ಲೂ ಕಳ್ಳತನದ ಸ್ವಲ್ಪ ತುಣುಕು ದಾಖಲಾದ ಮಾಹಿತಿ ಇದೆ. ಹೊಸಪೇಟೆ ಸರ್ಕಲ್ ಬಳಿ ಮಧ್ಯರಾತ್ರಿ 12 ಗಂಟೆ ತನಕವೂ 20ರಷ್ಟು ಯುವಕರು ಬೇಡರವೇಷ ಕುಣಿತದ ತಾಲೀಮು ನಡೆಸುತ್ತಿದ್ದರು. ಸ್ವಲ್ಪ ದೂರ ಸಾಮ್ರಾಟ್ ಬಳಿಯೂ ಬೇಡರವೇಷದ ತಾಲೀಮು ನಡೆಯುತ್ತಿತ್ತು. ಅವರೆಲ್ಲ ಹೋದ ನಂತರ ಕಳ್ಳರು ಎಟಿಎಂ ಕಳ್ಳತನ ಮಾಡಿರುವ ಲಕ್ಷಣ ಕಾಣುತ್ತಿದೆ.
loading...
No comments