Breaking News

ಈರುಳ್ಳಿಯನ್ನು ಮನೆ ಮದ್ದು ಆಗಿ ಉಪಯೋಗಿಸಿ


ಈರುಳ್ಳಿಯು ಪಿತ್ತಹರ ಕಫ‌ಹರ. ಈರುಳ್ಳಿಯ ಬೀಜ ವಾತಹರ. ಇದು ರಜಸ್‌ ಮತ್ತು ತಮೋಗುಣವನ್ನು ವೃದ್ಧಿಸುತ್ತದೆ.
ಈರುಳ್ಳಿಯಲ್ಲಿ ಶರ್ಕರಪಿಷ್ಟ , ಪ್ರೊಟೀನ್‌, ಕ್ಯಾಲಿÏಯಂ, ಕಬ್ಬಿಣ ಸಣ್ತೀ , ಜೀವಸತ್ವ ಎಬಿಸಿಗಳನ್ನು ಹೊಂದಿದೆ.


ಈರುಳ್ಳಿ 2 ಚಮಚಕ್ಕೆ 2 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಧಿಕ ರಕ್ತದೊತ್ತಡ ಶಮನವಾಗುತ್ತದೆ.
ನೆಗಡಿ, ಕೆಮ್ಮು ಕಫ‌ಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ  ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.
ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ. ಇದು ರಕ್ತವರ್ಧಕವೂ ಹೌದು.
ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಆರಿದ ಬಳಿಕ ಕಾಳುಮೆಣಸಿನ ಹುಡಿ, ಜೇನು ಬೆರೆಸಿ ಸೇವಿಸಿದರೆ ಕೆಮ್ಮು ದಮ್ಮು ಶಮನವಾಗುತ್ತದೆ.
ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿ ವೃದ್ಧಿಯಾಗುತ್ತದೆ.
4 ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ಶಮನವಾಗುತ್ತದೆ.
ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ.
ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
ಬಲಹೀನತೆ, ಅಶಕ್ತಿ ಇರುವಾಗ ಈರುಳ್ಳಿ ರಸ 3 ಚಮಚ, ತುಪ್ಪ 3 ಚಮಚ ಬೆರೆಸಿ ನಿತ್ಯ ಸೇವಿಸಿದರೆ ಬಲ್ಯ ಮತ್ತು ಶಕ್ತಿಕಾರಕ.
ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಕ್ರಮಯುತವಾಗಿ ಉಂಟಾಗುತ್ತದೆ.
ಸುಣ್ಣದ ತಿಳಿನೀರು ಮತ್ತು ಈರುಳ್ಳಿ ರಸ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕಾಲರಾ ರೋಗದಲ್ಲಿ ಗುಣಕಾರಿ.
ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್‌ ನಿತ್ಯ ಸೇವಿಸಿದರೆ  ಮೂತ್ರದ ಸೋಂಕು, ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.
ಅರ್ಧ ಕಪ್‌ ಈರುಳ್ಳಿ ಜ್ಯೂಸ್‌ಗೆ 4 ಚಮಚ ಕಲ್ಲುಸಕ್ಕರೆ ಪುಡಿ ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿ ಶಮನವಾಗುತ್ತದೆ.
ದಾಳಿಂಬೆ ಸಿಪ್ಪೆಯ ಕಷಾಯದಲ್ಲಿ ಈರುಳ್ಳಿ ರಸ ಬೆರೆಸಿ ನೀಡಿದರೆ ಅತಿಸಾರ, ಆಮಶಂಕೆ ಶಮನವಾಗುತ್ತದೆ.
ಹೊಟ್ಟೆನೋವು ಇರುವಾಗ 2 ಚಮಚ ಈರುಳ್ಳಿ ರಸ, 2 ಚಮಚ ಲಿಂಬೆರಸ, 2 ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.
ಕಪ್ಪು ಜೀರಿಗೆ ಮತ್ತು ಈರುಳ್ಳಿಯನ್ನು ಜಜ್ಜಿ ಅದರ ಹೊಗೆ ಸೇವಿಸಿದರೆ ಹಲ್ಲುನೋವು, ಒಸಡು ಊತ ಶಮನವಾಗುತ್ತದೆ.
ಸಾಸಿವೆ ಎಣ್ಣೆ ಮತ್ತು ಈರುಳ್ಳಿ ರಸ ಬೆರೆಸಿ ಬೆಚ್ಚಗೆ ಮಾಡಿ ಗಂಟುನೋವಿಗೆ ಲೇಪಿಸಿದರೆ, ಗಂಟುನೋವು, ಊತ ಶಮನವಾಗುತ್ತದೆ. ದಿನಕ್ಕೆ 3-4 ಬಾರಿ ಲೇಪಿಸಬೇಕು.
ಚಳಿಯಲ್ಲಿ ಕಾಲು ಒಡೆದರೆ ಈರುಳ್ಳಿಯ ಬಿಲ್ಲೆಯಿಂದ ಕಾಲಿನ ಹಿಮ್ಮಡಿಯನ್ನು ತಿಕ್ಕಿ , ತದನಂತರ ಕೊಬ್ಬರಿ ಎಣ್ಣೆ ಲೇಪಿಸಿದರೆ. ಕಾಲಿನ ಒಡಕು ಶಮನವಾಗುತ್ತದೆ.
ಶಿಲೀಂಧ್ರದ ಸೋಂಕು ಹಾಗೂ ತುರಿಕೆ, ಕಜ್ಜಿ ಮುಂತಾದ ಚರ್ಮದ ತೊಂದರೆಗಳಲ್ಲಿ ಲಿಂಬೆರಸ, ತುಳಸೀರಸಕ್ಕೆ ಅಷ್ಟೇ ಪ್ರಮಾಣದ ಈರುಳ್ಳಿ ರಸ ಬೆರೆಸಿ ಲೇಪಿಸಿದರೆ ಶಮನಕಾರಿ.
ಹಿಮ್ಮಡಿಯ ಸೀಲಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟಬಹುದು.
ತೂಕ ಹೆಚ್ಚಾಗಬೇಕೆಂದಾಗ ಬೆಲ್ಲದೊಂದಿಗೆ ದಿನವೂ ಈರುಳ್ಳಿಯ ಒಂದು ಗಡ್ಡೆಯನ್ನು ಸೇವಿಸುತ್ತಾ ಬರಬಹುದು.
ತುರಿಕಜ್ಜಿ ಇತ್ಯಾದಿ ಚರ್ಮರೋಗವಿದ್ದಾಗ ಬಿಳೀ ಈರುಳ್ಳಿ ರಸಕ್ಕೆ ಅರಸಿನಪುಡಿ ಕಲಸಿ ಬಾಹ್ಯಲೇಪನವಾಗಿ ಹಚ್ಚುವುದರಿಂದ ಅನುಕೂಲ ದೊರೆಯುವುದು.
ಜೇನುನೊಣ ಇಲ್ಲವೇ ಚೇಳು ಕಚ್ಚಿದಾಗ ಆ ಭಾಗದ ಮೇಲೆ ಈರುಳ್ಳಿ ಹೋಳನ್ನು ತಿಕ್ಕುವುದರಿಂದ ಉಪಶಮನ ದೊರೆಯುವುದು. ಅಲ್ಲದೆ ಕಿವಿಶೂಲೆಯಲ್ಲಿ ಇದರ ರಸವನ್ನು ಸ್ವಲ್ಪ ಬಿಸಿಮಾಡಿ ಒಂದೆರಡು ಹನಿ ಬಿಟ್ಟರೆ ನೋವು ಬಿಟ್ಟುಹೋಗುವುದು. ಸೋರುತ್ತಿದ್ದರೂ ಕೂಡಾ ಅದನ್ನು ನಿಲ್ಲಿಸುವುದು.
ಪ್ರತಿ ದಿನ ಈರುಳ್ಳಿ ಸೇವನೆಯಿಂದ ರಕ್ತ ವೃದ್ಧಿಸುತ್ತದೆ.
ಒಂದು ಈರುಳ್ಳಿಯನ್ನು ಸಣ್ಣ ಹೆಚ್ಚಿ ತುಪ್ಪದಲ್ಲಿ ಹುರಿದು ಕೊಟ್ಟಣದ ಅನ್ನದೊಂದಿಗೆ ಕಲಸಿ ತಿಂದರೆ ರಕ್ತಬೇದಿ ಶಮನ.
ಒಂದು ಈರುಳ್ಳಿ ಗಡ್ಡೆಯನ್ನು ಕೆಂಡದಲ್ಲಿ  ಸುಟ್ಟು ತಿನ್ನುವುದು ಆಮಶಂಕೆ ರೋಗಕ್ಕೆ ಉತ್ತಮ.
ಎರಡು ಟೀ ಚಮಚ ಈರುಳ್ಳಿ ರಸ, ತುಪ್ಪದಲ್ಲಿ ಹುರಿದ ಕಡಲೇಕಾಳು ಗಾತ್ರದ ಇಂಗು, ಎರಡು ಟೀ ಚಮಚ ಬಡೇಸೊಪ್ಪಿನ ಪುಡಿ-ಒಟ್ಟಿಗೆ ಕಲಸಿ ಸೇವಿಸುತ್ತ ಬಂದರೆ ವಾಂತಿ ಭೇದಿಗೆ ಒಳ್ಳೆಯದು.


loading...

No comments