Breaking News

ಸಚಿವ ಖಾದರ್ ಅವಹೇಳನಕಾರಿ ಪೋಸ್ಟರ್ ಬಹಿರಂಗವಾಗಿ ಅಂಟಿಸಿದ ಕಿಡಿಗೇಡಿಗಳು


ಮಂಗಳೂರು  : ರಾಜ್ಯ ಆಹಾರ ಸಚಿವ ಯು ಟಿ ಖಾದರ್ ಅವರ `ಚಪ್ಪಲಿ’ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥಿಯರಿಂದ ವ್ಯಾಪಕ ಆಕ್ರೋಶ-ವ್ಯಂಗ್ಯ ಹಾಗೂ ಅವಹೇಳನದ ಸಂದೇಶಗಳನ್ನು ರವಾನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾಯಿತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಕಿಡಿಗೇಡಿಗಳು ಬಹಿರಂಗ ಕರಪತ್ರಗಳನ್ನು ಸಚಿವ ಯು ಟಿ ಖಾದರ್ ವಿರುದ್ಧ ಮುದ್ರಿಸಿ ಪೇಟೆ-ಪಟ್ಟಣಗಳ ಬೀದಿಗಳಲ್ಲಿ ಅಂಟಿಸಿದ ದೃಶ್ಯ ಕಂಡುಬರುತ್ತಿದೆ.

ಬಿ ಸಿ ರೋಡು ಪೇಟೆಯ ಫ್ಲೈ ಓವರ್ ಪಿಲ್ಲರ್ ಮೇಲೆ ಇಂತಹ ಕರಪತ್ರ ಅಂಟಿಸಿರುವುದು ಕಂಡುಬಂದಿದೆ. ಕರಪತ್ರದಲ್ಲಿ “ಕಾಮರೆಡ್ ಪಿಣರಾಯ್ ವಿಜಯನ್ ಚಪ್ಪಲ್ ಶಾಪ್ ; ಮಾಲಕರು – ಯು ಟಿ ಖಾದರ್ ಕರ್ನಾಟಕ ಚಪ್ಪಲ್ ಸಚಿವರು” ಎಂಬ ಒಕ್ಕಣೆಯುಳ್ಳ ಬರಹ ಮುದ್ರಿಸಲಾಗಿದ್ದು, ಅದರ ಮಧ್ಯೆ ಪೈಜಾಮ್ ಧರಿಸಿದ ಯು ಟಿ ಖಾದರ್ ಫೋಟೋವನ್ನು ಅಳವಡಿಸಲಾಗಿದೆ.


loading...

No comments