Breaking News

ರಾಮಮಂದಿರ ನಿರ್ಮಾಣಕ್ಕೆ ವಿಹಿಂಪ ಒತ್ತಾಯ


ಮಂದಿರ ನಿರ್ಮಿಸಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಕಾನೂನು ರೂಪಿಸಿ ಎಂದ vhp

ಆಗ್ರಾ: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ  ಗೆಲುವು ದಾಖಲಿಸಿದ ಆರು ದಿನಗಳ ಬಳಿಕ ವಿಶ್ವಹಿಂದೂ ಪರಿಷತ್‌ ರಾಮಮಂದಿರ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದೆ. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಕಾನೂನು ರೂಪಿಸಬೇಕೆಂದು ವಿಹಿಂಪ ಒತ್ತಾಯಿಸಿದೆ.

ಮಾರ್ಚ್‌ 28ರಿಂದ ಏಪ್ರಿಲ್‌ 10ರ ವರೆಗೆ 'ರಾಮ ಮಹೋತ್ಸವ' ಆಚರಿಸುವುದಾಗ ವಿಹಿಂಪ ಘೋಷಿಸಿದ್ದು, ದೇಶಾದ್ಯಂತ 600 ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸುವುದಾಗಿ ಹೇಳಿದೆ. ಮಹೋತ್ಸವವು ರಾಮನವಮಿ ಸಂದರ್ಭದಲ್ಲೇ ನಡೆಯಲಿದೆ ಎಂದು ಪರಿಷತ್‌ನ ಅಂತಾರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಈ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕವೂ ಸೇರಿದಂತೆ ಕನಿಷ್ಠ 5 ಕೋಟಿ ಜನರನ್ನು ಸಂಪರ್ಕಿಸಿ ರಾಮಮಂದಿರ ನಿರ್ಮಾಣದ ಆಂದೋಲನಕ್ಕೆ ಪುನಶ್ಚೇತನ ನೀಡಲಾಗುವುದು ಎಂದು ಅವರು ತಿಳಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ರಾಮ ಮಹೋತ್ಸವ ನಡೆಸಲಾಗುತ್ತಿದೆ. ಆದರೆ ಈ ಬಾರಿ ಬಿಜೆಪಿಯ ಭರ್ಜರಿ ಜಯಗಳಿಸಿರುವುದು ಮಂದಿರ ನಿರ್ಮಾಣದ ನಿಟ್ಟಿನಲ್ಲಿ ಮತ್ತಷ್ಟು ಬಲ ನೀಡಿದೆ ಎಂದು ಜೈನ್ ಹೇಳಿದರು.

'ಈ ಬೇಡಿಕೆಯನ್ನು ಬಿಜೆಪಿ ಈಡೇರಿಸುತ್ತದೆ ಎಂದು ಹಿಂದೆಯೂ ನಾವು ನಂಬಿದ್ದೆವು. ಆದರೆ ಈ ಬಾರಿ ಶೀಘ್ರವೇ ರಾಮ ಮಂದಿರ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಜೈನ್ ನುಡಿದರು.

ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹೋತ್ಸವದ ನಿರ್ಧಾರ ಕೈಗೊಳ್ಳಲಾಯಿತು. ಈಗಾಗಲೇ ಮಂದಿರ ನಿರ್ಮಾಣದ ಕಲ್ಲುಗಳ ಕತ್ತೆನೆ ಕಾರ್ಯ ಸಂಪೂರ್ಣಗೊಂಡಿದ್ದು, ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯ ಪೂರ್ತಿಗೊಳಿಸಲಾಗಿದೆ ಎಂದು ಅವರು ಬ್ರಜ್ ಪ್ರಾಂತ್ಯದ ಉಪಾಧ್ಯಕ್ಷ ಸುನಿಲ್ ಪರಾಶರ್ ತಿಳಿಸಿದರು.
loading...

No comments