Breaking News

ಬರಿಮಾರಿನ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ


ಮಂಗಳೂರು :ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ ಕುರಿತು ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ, ಸುಮಾರು 10 ಲಕ್ಷ ರೂ ಮೌಲ್ಯದ ಮರಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಭೂಷಣ್ ಜಿ. ಬೊರಸೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್ ನೇತೃತ್ವದಲ್ಲಿ ಸಿಪಿಐ ಮಂಜಯ್ಯ ಮತ್ತು ಸಿಬ್ಬಂದಿ ಈ ದಾಳಿ ಕಾರ್ಯ ನಡೆಸಿದರು.

ಶುಕ್ರವಾರ ನಡೆಸಿದ ದಾಳಿ ಸಂದರ್ಭ ಸುಮಾರು 20 ಲೋಡ್ ನಷ್ಟು ಮರಳು ಹಾಗೂ ಗಣಿಗಾರಿಕೆಗೆ ಉಪಯೋಗಿಸಿದ 12 ದೋಣಿಗಳನ್ನು ಇತರ ಪರಿಕರಗಳೊಂದಿಗೆ ಜಪ್ತಿ ಮಾಡಲಾಯಿತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...

No comments