ಬಿಜೆಪಿ ನಾಯಕ ಗೋ.ಮಧುಸೂದನ್ ಅವರ ಟೈಗರ್ ರಾಂಚ್ ರೆಸಾರ್ಟ್ ತೆರವು
ಚಾಮರಾಜನಗರ: ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರಿಗೆ ಸೇರಿದ ಟೈಗರ್ ರಾಂಚ್ ರೆಸಾರ್ಟ್‍ನ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಬಂಡಿಪುರದ ಅಭಯಾರಣ್ಯ ವ್ಯಾಪ್ತಿಯಲ್ಲಿ ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ 40 ಎಕರೆ ಜಮೀನು ಖರೀದಿಸಿ ಅದರಲ್ಲಿ ನಿರ್ಮಿಸಿದ್ದ ರೆಸಾರ್ಟ್ ತೆರವು ಕಾರ್ಯ ಆರಂಭವಾಗಿದೆ. ಗ್ರಾಮ ಸಹಾಯಕರು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಕಾಟೇಜ್‍ಗಳಲ್ಲಿದ್ದ ಪೀಠೋಪಕರಣಗಳು, ಮಂಚ ಮುಂತಾದ ವಸ್ತುಗಳನ್ನು ತೆರವುಗೊಳಿಸಲಾಗಿದೆ.
loading...
No comments