Breaking News

ಸುಳ್ಯ ಸೀಮೆಯ ದೇವರ ಮೀನುಗಳಿಗೆ ನೀರಿನ ಕೊರತೆ


ಮಂಗಳೂರು : ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ "ಅರಂತೋಡು "ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ .

ತೊಡಿಕಾನದ  ಶ್ರೀ ಮಲ್ಲಿಕಾರ್ಜುನ ದೇವಾಲಯ  ಹಲವಾರು ಯಾತ್ರಿಗಳು ಮತ್ತು ಭಕ್ತ ಸಮುದಾಯವನ್ನು ಸೆಳೆದ ಕ್ಷೇತ್ರವಾಗಿದ್ದು ಇಲ್ಲಿನ ವಿಶೇಷತೆ ಎಂದರೆ ಇಲ್ಲಿನ   'ಮತ್ಸ್ಯತೀರ್ಥ  ಇಲ್ಲಿನ ಹೊಳೆ ಯಲ್ಲಿ  ಹಲವಾರು ದೇವರು ಮೀನುಗಳು ಕಾಣ ಸಿಗುತ್ತದೆ.

ಬೇಸಗೆ ಶುರುವಾದ ಕೂಡಲೇ ಕೆರೆಯ ನೀರಿನ ಮಟ್ಟ ಕಡಿಮೆ ಆಗಿ ಮೀನುಗಳು ಜೀವವನ್ನು ರಕ್ಷಿಸಲು ಪರದಾಡುವುದು ಸಾಮಾನ್ಯವಾಗಿ ಬಿಟ್ಟಿದೆ .

ದೇವಸ್ಥಾನದ ಆಡಳಿತ ಮಂಡಳಿ ಕಳೆದ ವರ್ಷ ದೇವರಗುಂಡಿ ಜಲ ಪಾತದಿಂದ ಮತ್ಸ್ಯತೀರ್ಥಕ್ಕೆ ನೀರು ಪೈಪ್ ಮೂಲಕ ನೀರು ಸರಬರಾಜು ಮಾಡಿತ್ತು ಆದರೆ ಈ ವರ್ಷ ಜಿಲ್ಲೆಯಲ್ಲಿ ಬರಗಾಲ ಛಾಯೆಯಿಂದ ದೇವರಗುಂಡಿಯಿಂದ ನೀರು  'ಮತ್ಸ್ಯತೀರ್ಥಕ್ಕೆ ನೀರು ಸರಬರಾಜು ಮಾಡಲು ನಿರಾಕರಿಸಲಾಗಿದೆ .

ಈ ಎಲ್ಲಾ ಬೆಳವಣಿಗೆಯಿಂದ ದೇವರ ಮೀನುಗಳ ಪಾಡು ಹೇಳತೀರದು .
ಇನ್ನೊಂದು ಕಡೆಯಿಂದ ಪುನಾರ್ ಪ್ರತಿಷ್ಠಾ ಬ್ರಹ್ಮಕಲಶಭಂಧ ನಡೆಯುತ್ತಿದ್ದು ಸಾವಿರಾರು ಭಕ್ತರು ಪ್ರತಿನಿತ್ಯ ಬೇಟಿ ನಿಡುತ್ತಿದ್ದಾರೆ. ಇದರೆಲ್ಲದರ ಮಧ್ಯೆ  ಮೀನು ಗಳಿಗೆ ನೀರಿನ ಕೊರತೆ ಎದ್ದು ಕಾಣುತ್ತಿದೆ.

loading...

No comments