ಡಬ್ಬಿಂಗ್ ಚಿತ್ರ ನಿಷೇಧಕ್ಕೆ ಮಸೂದೆ ಜಾರಿಗೆ ಮಾಡಿ ವಾಟಾಳ್
ಬೆಂಗಳೂರು : ರಾಜ್ಯದಲ್ಲಿ ಅನ್ಯಭಾಷೆಯ ಯಾವುದೇ ಡಬ್ಬಿಂಗ್ ಚಿತ್ರಗಳು ಪ್ರದರ್ಶನವಾಗಬಾರದು. ಇಂತಹ ಚಿತ್ರಗಳನ್ನು ಡಬ್ಬಿಂಗ್ ಮಾಡದಂತೆ ಮಸೂದೆಯನ್ನು ತರಬೇಕು ಎಂದು ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಚಲನಚಿತ್ರ ಕಲಾವಿದರು, ಕನ್ನಡ ಪರ ಹೋರಾಟಗಾರರು, ಚಿತ್ರ ನಿರ್ಮಾಪಕರ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅನ್ಯಭಾಷೆಗಳ ಡಬ್ಬಿಂಗ್ ಅನ್ನು ವಿರೋಧಿಸಿ ಇದೇ ತಿಂಗಳ 9 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯ ಸೇರಿದಂತೆ, ಇತರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಾದರೆ, ಕರ್ನಾಟಕದಲ್ಲೂ ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಲು ಸಿದ್ಧ ಎಂದು ಅವರು ತಿಳಿಸಿದರು.
loading...
No comments