Breaking News

ಅರಣ್ಯ ಸಚಿವರನ್ನು ಬೀದಿನಾಯಿಗೆ ಹೋಲಿಸಿದ ಅರಣ್ಯ ಸಿಬ್ಬಂದಿ
ಧಾರವಾಡ : ಧಾರವಾಡದ ಬೆಣಸಿ ಅರಣ್ಯವಲಯದ ಇಲಾಖೆಯ ಸಿಬ್ಬಂದಿ ಅರಣ್ಯ ಸಚಿವರನ್ನು ಬೀದಿನಾಯಿ, ಹಂದಿ ಎಂದು ಅವಾಚ್ಯ ಶಬ್ದಗಳ ಪದ ಬಳಕೆ ಮಾಡಿದ ವಿಚಿತ್ರ ಘಟನೆ ವರದಿಯಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಎಂ ಬಿ ಲಮಾಣಿ ಅರಣ್ಯ ಸಚಿವ ರಮಾನಾಥ್ ರೈರನ್ನು ಹಂದಿ, ಬೀದಿನಾಯಿಗೆ ಹೋಲಿಸಿ ಅಸಭ್ಯ ವರ್ತನೆ ತೋರಿದ್ದಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮೊಬೈಲ್ ವಿಡಿಯೋದಲ್ಲಿ ದಾಖಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ವಿಡಿಯೋ ಇದೀಗ ವೈರಲ್ ಆಗಿದ್ದು, ಅಸಭ್ಯ ವರ್ತನೆ ತೋರಿರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ರಮಾನಾಥ್ ರೈ ತಿಳಿಸಿದ್ದಾರೆ.

No comments