ಹೊಲಕ್ಕೆ ಬಂದ ಆಡುಗಳನ್ನು ಓಡಿಸಿದಕ್ಕೆ ಕಬ್ಬಿಣದ ರಾಡಿನಿಂದ ಕುಟುಂಬದ ಮೇಲೆ ಹಲ್ಲೆ
ಮಂಗಳೂರು : ಕೃಷಿಕ ಕುಟುಂಬಕ್ಕೆ ಕುಲಕ್ಷ ಕಾರಣಕ್ಕೆ ಮಾರಾಣಾಂತಿಕ ಹಲ್ಲೆ ಮಾಡಿದ ಘಟನೆ ತಲಪಾಡಿ ಕಿನ್ಯಾ ಬೆಳರಿಂಗೆಯಲ್ಲಿ ವರದಿ ಆಗಿದೆ .
ತಲಪಾಡಿ ನಿವಾಸಿ ಹಮೀದ್ ಅವರಿಗೆ ಸೇರಿದ ಆಡುಗಳು ಪುಷ್ಪ ಅವರ ಹೊಲಕ್ಕೆ ನುಗ್ಗಿದ್ದಾಗ ಆಡುಗಳನ್ನು ಪುಷ್ಪ ಓಡಿಸಿದ್ದಾರೆ .ಈ ಬಗ್ಗೆ ಕುಪಿತಗೊಂಡ ಹಮೀದ್ ,ಪುತ್ರ ಫತಾಕ್ ಮತ್ತು ಸಹಚರರು ಅಕ್ರಮ ಕೂಟ ಸೇರಿ ಎಕಾ ಏಕಿ ಪುಷ್ಪ ಅವರ ಮನೆಗೆ ನುಗ್ಗಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ .ಗಾಯಾಳು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ .ಘಟನೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ .
loading...
No comments