Breaking News

ಎಎಸ್‍ಐ ಮೇಲೆ ಹಲ್ಲೆ ನಡೆಸಿದ pfi ಕಾರ್ಯಕರ್ತರ ಬಂಧನ


ಮಂಗಳೂರು :  ಉರ್ವ ಠಾಣಾ ವ್ಯಾಪ್ತಿಯಲ್ಲಿ  ಎ.ಎಸ್.ಐ ಐತಪ್ಪರವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ .ಬಂಧಿತ ಆರೋಪಿಗಳನ್ನು  ಶಮೀರ್ ಕಾಟಿಪಳ್ಳ ಮತ್ತು ನಿಯಾಝ್ ಎಂದು ಗುರುತಿಸಲಾಗಿದೆ .ಬಂಧಿತ ಆರೋಪಿಗಳು ಪಾಪ್ಯುಲರ್ ಫ್ರಂಟ್ ಇಂಡಿಯಾದ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗಿದೆ .ಬಂಧಿತ ಆರೋಪಿ ಶಮೀರ್ ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದಾನೆ.

ಘಟನೆ ವಿವರ
  ಉರ್ವ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ  ಎ.ಎಸ್.ಐ ಐತಪ್ಪರವರ  ಬೆಳಿಗ್ಗೆ  03:20 ಗಂಟೆಗೆ ಲೇಡಿಹಿಲ್ ವೃತ್ತದ ಬಳಿ ತಲುಪುತ್ತಿದ್ದಂತೆ   ಹಿಂದಿನಿಂದ ಬಂದ ಬೈಕ್‌ ಸವಾರರು ಬೈಕನ್ನು ಎ.ಎಸ್.ಐ ಅವರ   ಬೈಕಿನ ಬಳಿ ನಿಲ್ಲಿಸಿ ಬೈಕಿನ ಮುಂದೆ ಕುಳಿತ ಸಾವರನು “ನೀವು ಯಾವ ಸ್ಟೇಷನ್‌ ರವರು ಎಂದು ಕೇಳಿದಾಗ, ತಾನು ಉರ್ವ ಠಾಣೆಯವನು ಎಂದು ಹೇಳಿ ಈ ಸಮಯದಲ್ಲಿ ಎಲ್ಲಿಗೆ ಹೋಗುತ್ತೀರಿ” ಎಂದು ಅವರನ್ನು ಕೇಳುವಷ್ಟರಲ್ಲಿ ಮುಂದಿನ ಸಾವರನು ಹಿಂಬದಿ ಸವಾರನಿಗೆ ‘ಅಡಿಲಾ’ ಎಂದು ಮಳಿಯಾಳಿ ಭಾಷೆಯಲ್ಲಿ ಹೇಳುತ್ತಿದ್ದಂತೆ ಹಿಂಬದಿ ಸವಾರನು ಐತಪ್ಪರವರ ತಲೆಯ ಹಿಂಭಾಗಕ್ಕೆ ಕಬ್ಬಿಣದ ರಾಡಿನಂತಹ ಹತ್ಯಾರಿನಿಂದ ಬಲವಾಗಿ ಹೊಡೆದು ಪರಾರಿ ಆಗಿರುತಾರೆ.


loading...

No comments