Breaking News

ರಾಮಮಂದಿರ ನಿರ್ಮಾಣವಾಗದೆ ರಾಮ ರಾಜ್ಯ ನಿರೀಕ್ಷಿಸಲು ಸಾಧ್ಯವಿಲ್ಲ ಸುರೇಂದ್ರ ಕುಮಾರ್ ಜೈನ್



ಮಂಗಳೂರು: ಶ್ರೀರಾಮ ರಾಷ್ಟ್ರಪುರುಷ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದು ಸಕಾಲವಾಗಿದ್ದು, ಇದು ಆಗಲೇ ಬೇಕು. ರಾಮ ಮಂದಿರ ನಿರ್ಮಾಣವಾಗದೆ ರಾಮರಾಜ್ಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಹೇಳಿದರು.

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ, ದುರ್ಗಾ ವಾಹಿನಿ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ೩ ದಿನ ನಡೆದ ಶ್ರೀರಾಮೋತ್ಸವದ ಸಂಪನ್ನದಲ್ಲಿ ನಿನ್ನೆ ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ಏಕತೆ, ಪರಸ್ಪರ ಪ್ರೀತಿ, ಸಹೋದರತೆ ಹೆಚ್ಚಾಗಬೇಕಾದರೆ ಶ್ರೀ ರಾಮನ ಆದರ್ಶ ಮೈಗೂಡಿಸಿಕೊಳ್ಳಬೇಕು, ಎಲ್ಲರನ್ನೂ ಒಂದಾಗಿಸಿ ಕೊಂಡೊಯ್ಯುವ ಗುಣ ಶ್ರೀ ರಾಮನಿಂದ ಕಲಿಯಬೇಕಿದೆ. ಈ ಭಾಗದಲ್ಲಿ ಅಹಿತಕರ ಘಟನೆಗಳನ್ನು ನೋಡುವಾಗ ನಮ್ಮ ರಾಜ್ಯದ ಆಡಳಿತ ಕರ್ನಾಟಕವನ್ನು ಕಾಶ್ಮೀರ ಮಾಡಲು ಹೊರಟಿದೆಯೇ ಎಂದು ಖೇದವಾಗುತ್ತಿದೆ ಎಂದರು.

loading...

No comments