Breaking News

ಸಂಪುಟ ವಿಸ್ತರಣೆ: ದೆಹಲಿಗೆ ತೆರಳಿದ ಸಿಎಂ


ಬೆಂಗಳೂರು :ಬೈ ಎಲೆಕ್ಷನ್​​ ಗೆದ್ದು ಜೋಶ್​​​​​ನಲ್ಲಿರೋ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಇವತ್ತು ಹೈಕಮಾಂಡ್ ಜೊತೆ ಚರ್ಚಿಸಿ ಫೈನಲ್ ಮಾಡಲಿದ್ದಾರೆ. ಸಂಪುಟದಲ್ಲಿ ಎರಡು ಸ್ಥಾನ ಖಾಲಿಯಿದ್ದು, ಒಂದು ಸ್ಥಾನಕ್ಕೆ ದಿವಂಗತ ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್​ಗೆ, ಮತ್ತೊಂದು ಸ್ಥಾನಕ್ಕೆ ಭಾರೀ ಲಾಬಿ ನಡೆದಿದೆ.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ನಡೆಯಲಿದೆ. ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಎಚ್​.ಎಂ.ರೇವಣ್ಣ, ಸಿಎಂ ಸಂಸದೀಯ ಕಾರ್ಯದರ್ಶಿ ಸಿ.ಎಸ್. ಶಿವಳ್ಳಿ, ಇತ್ತೀಚೆಗಷ್ಟೇ ಸಂಪುಟದಿಂದ ಹೊರ ನಡೆದಿದ್ದ ಎಸ್​.ಆರ್​.ಪಾಟೀಲ್​​ ಭಾರೀ ಲಾಬಿ ನಡೆಸಿದ್ದಾರೆ.
ಜೊತೆಗೆ ಮಾಜಿ ಸಚಿವ ಬಾಗಲಕೋಟೆಯ ಆರ್.ಬಿ.ತಿಮ್ಮಾಪುರ್ ಕೂಡ ಯತ್ನ ನಡೆಸಿದ್ದಾರೆ. ಗೀತಾ ಮಹದೇವ ಪ್ರಸಾದ್ ಮತ್ತು ಪಾಟೀಲ್ ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹಾಗಾಗಿ ಮೇಟಿ ಸ್ಥಾನಕ್ಕೆ ಅದೇ ಕುರುಬ ಸಮುದಾಯದ ಹೆಚ್ ಎಂ ರೇವಣ್ಣರನ್ನ ಕರೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವೇಳೆ ಕೆಪಿಸಿಸಿಗೆ ನೂತನ ಸಾರಥಿ ಆಯ್ಕೆ ಬಗ್ಗೆಯೂ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ರಾಮಯ್ಯ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಡಿ ಕೆ ಶಿವಕುಮಾರ್, ಎಸ್ ಆರ್ ಪಾಟೀಲ್ ಮತ್ತು ಕೇಂದ್ರದ ಮಾಜಿ ಸಚಿವ ಕೆ. ಹೆಚ್ ಮುನಿಯಪ್ಪ ಕೂಡ ಅಧ್ಯಕ್ಷ ಗಾದಿಯ ಆಕಾಂಕ್ಷಿಗಳಾಗಿದ್ದಾರೆ.
loading...

No comments