Breaking News

ದೆಹಲಿ ಪಾಲಿಕೆ ಚುನಾವಣೆ ಬಿಜೆಪಿ ಜಯಭೇರಿ : ಎ‌ಎಪಿ, ಕಾಂಗ್ರೆಸ್ ಪಕ್ಷಗಳು ಧೂಳಿಪಟ



ನವದೆಹಲಿ :  ದೆಹಲಿಯ 3 ನಗರಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿರುವ ಬಿಜೆಪಿ ಮೂರನೇ ಬಾರಿಗೆ ದೆಹಲಿ ನಗರಸಭೆ ಆಡಳಿತ ಹಿಡಿಯುವ ಹಾದಿಯಲ್ಲಿ ಸಾಗಿದೆ.

ಮೂರು ನಗರ ಪಾಲಿಕೆಗಳಲ್ಲಿ ಬಿಜೆಪಿ ಭಾರಿ ಮುಂದಿದೆ. ಎರಡನೇ ಸ್ಥಾನಕ್ಕಾಗಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ಗಳು ಸೆಣಸಾಟ ನಡೆಸುತ್ತಿವೆ.

ಬೆಳಿಗ್ಗೆ 8 ಗಂಟೆಗೆ 35 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಇತ್ತೀಚಿನ ಫಲಿತಾಂಶಗಳರಿತ್ಯ ಬಿಜೆಪಿ 187 ಸ್ಥಾನಗಳಲ್ಲಿ, ಕಾಂಗ್ರೆಸ್ 40 ಮತ್ತು ಆಮ್ ಆದ್ಮಿ ಪಕ್ಷ 37 ಸ್ಥಾನಗಳಲ್ಲಿ ಮುಂದಿವೆ.

ಏಪ್ರಿಲ್ 23 ರಂದು ದೆಹಲಿಯ ಉತ್ತರ, ದಕ್ಷಿಣ ಮತ್ತು ಪೂರ್ವ ನಗರಪಾಲಿಕೆಗಳಿಗೆ ಚುನಾವಣೆ ನಡೆದಿತ್ತು.

ಈ ಮೂರು ನಗರಪಾಲಿಕೆಗಳ ಒಟ್ಟು 272 ರಲ್ಲಿ 270 ವಾರ್ಡ್‌ಗಳಿಗೆ ನಡೆದ ಚುನಾವಣೆ ಬಿಜೆಪಿ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಈ ಮೂರು ಪಕ್ಷಗಳಿಗೆ ಭಾರಿ ಪ್ರತಿಷ್ಠೆಯ ಕಣವಾಗಿತ್ತು. ಅದರಲ್ಲಿಯೂ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಇದು ಸತ್ವ ಪರೀಕ್ಷೆಯೂ ಆಗಿತ್ತು.

ದೆಹಲಿ ನಗರ ಪಾಲಿಕೆ ಚುನಾವಣೆಯ ಸಮೀಕ್ಷೆಗಳು ಹೇಳಿದ್ದಂತೆ, ಬಿಜೆಪಿ ಗೆಲುವಿನ ನಾಗಾಲೋಟದಲ್ಲಿದ್ದರೆ ಆಪ್ ಮತ್ತು ಕಾಂಗ್ರೆಸ್ ಭಾರಿ ಹಿಂದೆ ಬಿದ್ದಿವೆ.

ದೆಹಲಿಯ ಮಹಾನಗರಪಾಲಿಕೆಯನ್ನು ಉತ್ತರ, ದಕ್ಷಿಣ, ಪೂರ್ವ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಒಟ್ಟು ವಾರ್ಡುಗಳ 272 ಇದರಲ್ಲಿ 2 ವಾರ್ಡ್ ಚುನಾವಣೆ ನಡೆಯಲಿಲ್ಲ.

ಹೀಗಾಗಿ ಈಗ ಚುನಾವಣೆಗೆ ಹೋಗಿರುವುದು 270 ವಾರ್ಡುಗಳು ಮಾತ್ರ. ಹೀಗಾಗಿ ಉತ್ತರ ದೆಹಲಿಯ ನಗರ ಪಾಲಿಕೆಯ 103, ದಕ್ಷಿಣ ನಗರ ಪಾಲಿಕೆಯ 104 ಮತ್ತು ಪೂರ್ವ ದೆಹಲಿ ನಗರಪಾಲಿಕೆಯ 63 ವಾರ್ಡ್‌ಗಳು ಚುನಾವಣೆಗೆ ಹೋಗಿದ್ದವು.

loading...

No comments