Breaking News

ಗಬ್ಬದ ದನಗಳನ್ನು ಅಮಾನುಷವಾಗಿ ಕತ್ತು ಸೀಳಿ ಹತ್ಯೆ ಮಾಡಿದ ಕಟುಕರ ಬಂಧನ



ಉಡುಪಿ  : ಬೆಳಪು-ಪಕೀರಣಕಟ್ಟೆ ಪರಿಸರದಲ್ಲಿ ಅಕ್ರಮವಾಗಿ  ಕಾರ್ಯಚರಿಸುತ್ತಿದ್ದ ಕಸಾಯಿಖಾನೆಗೆ ಶಿರ್ವ ಪೊಲೀಸರು ದಾಳಿ ಮಾಡಿದ ಸಂದರ್ಭ ದನಗಳೆರಡನ್ನು ಕಡಿದು ಮಾಂಸ ಮಾಡುತ್ತಿದ್ದ ಇಬ್ಬರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ  ಉಳಿದ ಪ್ರಮುಖ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತರು ಮೂಲತಃ ಶಿವಮೊಗ್ಗ ಜಿಲ್ಲೆಯ ಮೇಗರಹಳ್ಳಿ ನಿವಾಸಿ ಇದೀಗ ಪಕೀರಣಕಟ್ಟೆ ಮಸೀದಿ ಬಳಿ ಬೆಳಪು ಗ್ರಾ ಪಂ ವ್ಯಾಪ್ತಿಯ ನಿವಾಸಿ ಶಬಾಸ್ ಎಂಬವರ ಪುತ್ರ ಹುಸೇನ್ (30) ಹಾಗೂ ಬೆಳಪು ಹಂಝ ಎಂಬವರ ಮಗ ನಿಸಾರ್ ಅಹಮದ್ (28). ತಲೆ ಮರೆಸಿಕೊಂಡ ಪ್ರಮುಖ ಆರೋಪಿತಗಳು ಸೂರ್ಯಗುಡ್ಡೆ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದೆ.

ಈ ಕೃತ್ಯವನ್ನೇ ಉದ್ಯೋಗನ್ನಾಗಿಸಿಕೊಂಡು ಮಾಡಿಕೊಂಡ ಈ ತಂಡ ಬಹಳಷ್ಟು ವರ್ಷಗಳಿಂದ ಈ ಭಾಗದಲ್ಲಿ ಕಸಾಯಿಖಾನೆ ನಡೆಸುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಗುಪ್ತ ಮಾಹಿತಿಯನ್ನು ಪಡೆದ ಶಿರ್ವ ಪೊಲೀಸರು ಶುಕ್ರವಾರ ಮುಂಜಾನೆ ಅನಧಿಕೃತ ಕಸಾಯಿಖಾನೆಗೆ ದಾಳಿ ಮಾಡಿದ್ದಾರೆ. ಸುಮಾರು 300 ಕೇಜಿ ತೂಕದ ಎರಡು ಗಬ್ಬದ ದನಗಳನ್ನು ಅಮಾನುಷವಾಗಿ ಕತ್ತು ಸೀಳಿ ಹತ್ಯೆ ಮಾಡಲಾಗಿದ್ದು, ಸತ್ತ ದನಗಳ ಕೆಚ್ಚಲಿನಿಂದ ಹಾಲು ಸೊರುತ್ತಿದ್ದು ನೋಡಗರ ಹೃದಯ ಚುಚ್ಚುವಂತ್ತಿತ್ತು. ಕಟುಕರು ಒಂದು ದನವನ್ನು ಸಂಪೂರ್ಣ ಮಾಂಸ ಮಾಡಲಾಗಿದ್ದು, ಮತ್ತೊಂದನ್ನು ಕೊಂದು ಚರ್ಮ ಸುಲಿಯುತ್ತಿದ್ದಂತ್ತೆ ಪೊಲೀಸರು ಎಂಟ್ರಿ ಕೊಟ್ಟರು. ಮಾಂಸ ಹಾಗೂ ಕೊಂದ ದನ ಸಹಿತ ಇತರೆ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
k-ale

loading...

No comments