Breaking News

ಅಶ್ವತ್ಥ ಕಟ್ಟೆಯಲ್ಲಿ ರಾಶಿಬಿದ್ದ ದೇವರ ಫೋಟೋ ವಿಲೇವಾರಿ ಮಾಡಿದ ಕಿನ್ನಿಮುಲ್ಕಿಯ ಯುವಕರ ತಂಡ



ಉಡುಪಿ : ಕಿನ್ನಿ ಮುಲ್ಕಿ ಹಿಂದೂ ಯುವಕರ ತಂಡವೊಂದು ಹಳೆಯ ಅಶ್ವತ್ಥ ಕಟ್ಟೆಯ ಕೆಳಗೆ ರಾಶಿ ಹಾಕಲಾಗಿದ್ದ ದೇವರ ಹಳೆಯ ಭಾವಚಿತ್ರಗಳು ಮತ್ತು ಇತರ ದೇವರ ಸಾಮಗ್ರಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ವಿಲೇವಾರಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಉದ್ಯಾವರ ಕಿನ್ನಿಮುಲ್ಕಿಯ ಯುವಕರ ತಂಡ ಈ ಕೆಲಸವನ್ನು ಮಾಡಿದ್ದು, ಬಲಾಯಿಪಾದೆ ಎಂಬಲ್ಲಿರುವ ಹಳೆಯ ಅಶ್ವತ್ಥ ಮರದ ಬುಡದಲ್ಲಿ ರಾಶಿ ಹಾಕಲಾಗಿದ್ದ ದೇವರ ಹಲವು ಫೋಟೋಗಳನ್ನು ಮತ್ತು ಇತರ ದೇವರ ಸಾಮಗ್ರಿಗಳನ್ನು ತೆರವುಗೊಳಿಸಿದ್ದಾರೆ.



ಕಿನ್ನಿಮುಲ್ಕಿ ನಿವಾಸಿ ನಾಗರಾಜ್ ಆಲದ ಮರದ ಅಡಿಯಲ್ಲಿ ಬಿದ್ದಿದ್ದ ದೇವರ ಭಾವಚಿತ್ರಗಳನ್ನು ಕಂಡರು. ಈ ಫೋಟೋಗಳು ಮಳೆಗೆ ಒದ್ದೆಯಾಗುತ್ತಿದ್ದವು, ಬಿಸಿಲಿಗೆ ಒಣಗುತ್ತಿದ್ದವು. ಇದನ್ನು ಕಂಡು ಅಸಮಾಧಾನಗೊಂಡ ಅವರು ಈ ಫೋಟೋಗಳನ್ನು ನಿರ್ವಹಿಸುವ ಬಗ್ಗೆ ಯೋಚನೆ  ಮಾಡಿದರು. ಬಳಿಕ ಅವರು ತನ್ನ ಸ್ನೇಹಿತರೊಡಗೂಡಿ ಈ ಚಿತ್ರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಕೈಗೊಂಡರು.

ಹೆಚ್ಚಿನ ಸಂದರ್ಭಗಳಲ್ಲಿ ಹಾನಿಗೊಂಡ ಅಥವಾ ಒಡೆದುಹೋದ ಭಾವಚಿತ್ರಗಳನ್ನು ಅಶ್ವತ್ಥ ಮರದ ಬುಡದಲ್ಲಿ ತಂದು ಹಾಕುತ್ತಿದ್ದರು. ಬಾಡಿಗೆ ಮನೆಯಿಂದ ಹೊಸ ಮನೆಗೆ ತೆರಳುವ ಸಂದರ್ಭದಲ್ಲಿಯೂ ಜನರು ಇದೇ ರೀತಿ ಮಾಡುತ್ತಾರೆ. ಹೀಗೆ ಅಶ್ವತ್ಥ ಮರದ ಕೆಳಗೆ ಎರಡು ಅಡಿ ಎತ್ತರದ ಕೃಷ್ಣನ ವಿಗ್ರಹವೂ ಸೇರಿದಂತೆ ಸುಮಾರು 200ಕ್ಕೂ ಅಧಿಕ ಫೋಟೊಗಳು ರಾಶಿಬಿದ್ದಿದ್ದವು. ಎಲ್ಲಾ ಫೋಟೋಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಧಾರ್ಮಿಕ ವಿಧಿವಿಧಾನದೊಂದಿಗೆ ವಿಲೇವಾರಿ ಮಾಡಲಾಯಿತು.  ಅಶ್ವತ್ಥ ಮರದ ಬುಡವನ್ನು ಶುದ್ಧೀಕರಿಸಿದರು ಮಾತ್ರವಲ್ಲ ಇಲ್ಲಿ ಯಾರೂ ದೇವರ ಫೋಟೋಗಳನ್ನು ಎಸೆಯಬಾರದು ಎಂಬ ಸೂಚನೆ ನೀಡುವ ಬ್ಯಾನರನ್ನು ಅಳವಡಿಸಿದರು. ಸ್ಥಳೀಯರು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದು ಅವರ ಕರ್ತವ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನಾಗರಾಜ್ ಹೇಳಿದ್ದಾರೆ. ಈ ತಂಡದ ಸದಸ್ಯರು ತಮ್ಮ ತಂಡವನ್ನು ಪಾಂಚಜನ್ಯ ಕಿನ್ನಿಮುಲ್ಕಿ ಎಂದು ಗುರುತಿಸಿಕೊಳ್ಳಲು ಬಯಸಿದ್ದಾರೆ. ತಂಡವು ಬೇಸಿಗೆ ಕಾಲದಲ್ಲಿ ಬಾಯಾರಿ ಬರುವ ಹಕ್ಕಿಗಳಿಗಾಗಿ ಅಲ್ಲಲ್ಲಿ ನೀರು ಇಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಗೋವರ್ಧನ, ಹರೀಶಕುಮಾರ್, ದೀಪಕಕುಮಾರ್ ಪಾಂಚಜನ್ಯ ತಂಡದ ಪ್ರಮುಖ ಸದಸ್ಯರು.

k ale


loading...

No comments