ಗೋ ಹಂತಕರನ್ನು ಗಲ್ಲಿಗೇರಿಸಿ : ಚತ್ತೀಸ್‌ಗಡ್ ಸಿಎಂ ರಮಣ್ ಸಿಂಗ್
ಚತ್ತೀಸ್‌ಗಡ್ : ನಿನ್ನೆಯಷ್ಟೇ ಗುಜರಾತ್ ಅಸೆಂಬ್ಲಿಯಲ್ಲಿ ಗೋ ಹತ್ಯೆ ವಿಚಾರವಾಗಿ ಕಠಿಣ ಕಾನೂನು ಮಸೂದೆ ಜಾರಿ ಆದ ಬೆನ್ನ ಹಿಂದೆ ಇದೀಗ ರಾಜ್ಯದಲ್ಲಿ ಗೋ ಹತ್ಯೆ ಮಾಡುವರನ್ನು ಗಲ್ಲಿಗೇರಿಸಬೇಕು ಎಂದು ಚತ್ತೀಸ್‌ಗಡ್ ಸಿಎಂ ರಮಣ್ ಸಿಂಗ್ ಹೇಳಿದ್ದಾರೆ .
ಬಸ್ಟರ್ ಜಿಲ್ಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಗೋ ಹತ್ಯೆ ವಿರುದ್ಧ ಕಠಿಣ ಕಾನೂನು ಮಸೂದೆ ಜಾರಿ ಗೊಳಿಸುವುದಾಗಿ ಹೇಳಿದರು .ಉತ್ತರಪ್ರದೇಶದಲ್ಲಿ ಗೋ ಹತ್ಯೆ ವಿಚಾರವಾಗಿ ನೂತನ ಸಿಎಂ ಯೋಗಿ ಆದಿತ್ಯನಾಥ್ ಅವರ ರಭಸದ ಕಾರ್ಯವೈಖರಿ ನಡುವೆ ಗೋ ಹತ್ಯೆ ಮಾಡುವರನ್ನು ಗಲ್ಲಿಗೇರಿಸಬೇಕು ಎಂದು ಚತ್ತೀಸ್‌ಗಡ್ ಸಿಎಂ ರಮಣ್ ಸಿಂಗ್ ಹೇಳಿಕೆ ಎಡ ಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿದು ಬಂದಿದೆ
loading...
No comments