Breaking News

ಯುಪಿಯಲ್ಲಿ ಬಿಜೆಪಿಯವರಿಗೆ ಗೋವು ಮಮ್ಮಿ ಆದರೆ ಈಶಾನ್ಯ ಭಾರತದಲ್ಲಿ ಯಮ್ಮಿ: ಒವೈಸಿ



ಹೊಸದಿಲ್ಲಿ: 'ಗೋಹತ್ಯೆ ನಿಷೇಧ ವಿಷಯದಲ್ಲಿ ಬಿಜೆಪಿ ದ್ವಂದ್ವ ನೀತಿ ಅನುಸರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಗೋವು ಮಾತೆಯಾಗಿದ್ದರೆ, ಈಶಾನ್ಯ ರಾಜ್ಯಗಳಲ್ಲಿ ಆಹಾರವಾಗುವುದು ಹೇಗೆ?' ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ ಗೋವು ಮಮ್ಮಿ(ತಾಯಿ)ಯಾಗಿದ್ದಾಳೆ, ಆದರೆ ಈಶಾನ್ಯ ಭಾರತದಲ್ಲಿ ಯಮ್ಮಿ(ಸ್ವಾದಿಷ್ಟ)ವಾಗಿದೆ. ಇದು ಬಿಜೆಪಿಯ ಕಪಟತನವಲ್ಲದೇ ಮತ್ತೇನು? ಎಂದು ಒವೈಸಿ ವ್ಯಂಗ್ಯ ವಾಡಿದ್ದಾರೆ
ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ, ಆದಕ್ಕಾಗೀ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆಯೇ? ಎಂದು ಅವರು ಕೇಳಿದ್ದಾರೆ.
ಬಿಜೆಪಿ ಗೋರಕ್ಷಣೆ ವಿಷಯದಲ್ಲಿ ಪ್ರಾಮಾಣಿಕವಾಗಿದ್ದರೆ ಗುಜರಾತ್, ಉತ್ತರ ಪ್ರದೇಶ ಮತ್ತು ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳಂತೆ ಈಶಾನ್ಯ ರಾಜ್ಯಗಳಲ್ಲೂ ಗೋಹತ್ಯೆ ನಿಷೇಧ ಜಾರಿಗೆ ತರಲಿ ಎಂದು ಅವರು ಸವಾಲು ಹಾಕಿದ್ದಾರೆ.

ಕ್ರೈಸ್ತರೇ ಹೆಚ್ಚಾಗಿರುವ ಮಣಿಪುರದಲ್ಲಿ ಇತ್ತೀಚೆಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಲ್ಲೂ ಗೋಹತ್ಯೆ ನಿಷೇಧ ತರಲಿ ಎಂದು ಅವರು ಹೇಳಿದ್ದಾರೆ.

loading...

No comments