ಜಿಯೋ 'ಸಮ್ಮರ್ ಸರ್ಪ್ರೈಸ್' ಬಗ್ಗೆ ನಿಮಗೆ ತಿಳಿದಿದೆಯೇ
ಹೊಸದಿಲ್ಲಿ: ದೇಶದ ಮುಂಚೂಣಿಯ ಮೊಬೈಲ್ ನೆಟ್‌ವರ್ಟ್ ಸಂಸ್ಥೆಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ 'ಸಮ್ಮರ್ ಸರ್ಪ್ರೈಸ್' ಪ್ಲಾನ್ ಬಿಡುಗಡೆ ಮಾಡುವ ಮೂಲಕ ಮಗೆದೊಮ್ಮೆ ಗ್ರಾಹಕರಿಗೆ ಸಿಹಿ ಸುದ್ದಿ ಬಿತ್ತರಿಸಿದೆ. ಅತ್ತ ಪ್ರೈಮ್ ಮೆಂಬರ್‌ಶಿಪ್‌ಗೆ ನೋಂದಣಿ ಮಾಡುವ ಕಾಲವಕಾಶವನ್ನು 2017 ಮಾರ್ಚ್ 31ರಿಂದ ಮತ್ತಷ್ಟು 15 ದಿನಕ್ಕೆ ವಿಸ್ತರಿಸಿದೆ.
ಇದರೊಂದಿಗೆ ಜಿಯೋ ಪ್ರೈಮ್‌ಗೆ ಮೆಂಬರ್‌ಶಿಪ್ ಪಡೆಯುವ ಅವಧಿಯನ್ನು 2017 ಏಪ್ರಿಲ್ 15ರ ವರೆಗೆ ವಿಸ್ತರಿಸಿದೆ. ಅದೇ ಹೊತ್ತಿಗೆ 'ಸಮ್ಮರ್ ಸರ್ಪ್ರೈಸ್' ಎಂಬ ನೂತನ ಪ್ಲಾನ್ ಮಾಡಿದೆ.
ನೂತನ ಪ್ಲಾನ್ ಅನ್ವಯ ಜಿಯೋ ತನ್ನ ಗ್ರಾಹಕರಿಗೆ ಮತ್ತಷ್ಟು ಮೂರು ತಿಂಗಳ ವರೆಗೆ ಪೂರಕ ಸೇವೆಯನ್ನು ಒದಗಿಸುತ್ತದೆ. ಇದರೊಂದಿಗೆ ಹೊಸತಾದ ಪೇಯ್ಡ್ ಟ್ಯಾರಿಫ್‌ಗಳು ಮೂರು ತಿಂಗಳುಗಳ ಆಫರ್‌ಗಳ ಬಳಿಕ ಅನ್ವಯವಾಗಲಿದೆ.
loading...
No comments