ಲವ್ ಜಿಹಾದ್ ,ಮತಾಂತರದ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ
ಹಾಸನ : ಲವ್ ಜಿಹಾದ್ ,ಮತಾಂತರದ ವಿರುದ್ಧ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ನಾರ್ವೆಯಲ್ಲಿ ಬುಧವಾರ ನಡೆದ ಹಿಂದೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಲ್ಲಡ್ಕ ಭಟ್ ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ .. ಈ ತನಕ ಸಾವಿರಾರು ಲವ್ ಜಿಹಾದ್ ಪ್ರಕರಣಗಳು ನಡೆದಿದೆ. ಅನೇಕ ಹಿಂದೂ ಹುಡುಗಿಯರು ಲವ್ ಜಿಹಾದ್ ಗೇ ಬಲೆಗೆ ಬಿದ್ದು ನರಕಯಾತನೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಹಿಂದೂ ಸಮಾಜ ಎಚ್ಚರದಿಂದಿರಬೇಕು ಎಂದರು .
ಹಿಂದೂ ಸಮಾಜ ಅನೇಕ ಶ್ರದ್ದಾಕೇಂದ್ರಗಳನ್ನು ಆರಾಧಿಸುತ್ತಾ ಬಂದಿದೆ. ಪ್ರಕೃತಿಯನ್ನು ಆರಾಧಿಸುವ ಜಗತ್ತಿನ ಏಕೈಕ ಧರ್ಮ ಎಂದು ಮನಪೂರ್ವಕವಾಗಿ ನುಡಿದರು. ಕಾಂಗ್ರೆಸ್ ವಿರುದ್ದನು ಆಕ್ರೋಶ ವ್ಯಕ್ತಪಡಿಸಿದ ಕಲ್ಲಡ್ಕ ಭಟ್ ಕಾಂಗ್ರೆಸ್ ಕಳೆದ 70 ವರುಷದಿಂದಲೂ ಹಿಂದೂ ಸಮಾಜಕ್ಕೆವಿರುದ್ದವಾದ, ಧರ್ಮಕ್ಕೆ ವಿರುದ್ಧವಾದ, ಮೌಲ್ಯಗಳಿಗೆ ವಿರುದ್ಧವಾದ ಕೆಲಸವನ್ನು ಮಾಡುತ್ತಾ ಬಂದಿದೆ .
ಕಾಂಗ್ರೆಸ್, ಮುಸ್ಲಿಮರು ,ಬ್ರಿಟಿಷರ ಷಡ್ಯಂತ್ರದಿಂದಾಗಿ ನಾವು ಹಲವು ಭೂಭಾಗಗಳನ್ನು ಕಳಕೊಂಡೆವು ಇದು ಯಾವ ಪಠ್ಯಪುಸ್ತಕದಲ್ಲೂ ಉಲ್ಲೇಖವಾಗಿಲ್ಲ ಭಾರತದಲ್ಲಿ ಈಗಿರುವ ಲಕ್ಷಾಂತರ ಮಸೀದಿಗಳು ಚರ್ಚ್ ಗಳು ನಮ್ಮ ಜಾಗದಲ್ಲೇ ನಡೆಯುತ್ತಿರುವುದು.. ಹಿಂದು ಮುಸ್ಲಿಂ ಗಲಾಟೆ ಯಾವತ್ತೂ ನಡೆದಿಲ್ಲ..ನಮ್ಮ ಮೇಲೆ ದಾಳಿ ಮಾಡಿದ ಮುಸ್ಲಿಮರಿಗೆ ತಿರುಗೇಟು ನೀಡಿದೆವು ಅಷ್ಟೇ. ಘರ್ ವಾಪಸಿ ಅನ್ನುವುದು ಒಂದು ಸಹಜವಾದ ಪ್ರಕ್ರಿಯೆ.ಅವರಾಗಿಯೇ ಮರಳಿ ಮಾತೃ ಧರ್ಮಕ್ಕೆ ಸೇರಿಕೊಳ್ಳುತ್ತಿದ್ದಾರೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ರವರು ಸಂವಿಧಾನ ರಚನೆ ಮಾಡಿ ಪ್ರಜಾಪ್ರಭುತ್ವದ ಯಶಸ್ವಿಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಅವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು. ಕಾರ್ಯಕ್ರಮದ ನೇತೃತ್ವವನ್ನು ನಾರ್ವೆಯ ಯುವತರುಣರು ವಹಿಸಿದ್ದರು..ಕಾರ್ಯಕ್ರಮದಲ್ಲಿ ನಾರ್ವೆಯ ಸುತ್ತಮುತ್ತಲ್ಲಿನ ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
loading...



No comments