Breaking News

ತಾಮ್ರದ ಬಿಂದಿಗೆಯೊಂದರಲ್ಲಿ ಪತ್ತೆಯಾದ ಬರೋಬ್ಬರಿ 82 ಚಿನ್ನದ ನಾಣ್ಯ



ಗದಗ: ಪಟ್ಟಣದ ಭೋಗೇರಿ ಓಣಿಯ ಮನೆಯ ಪಾಯ ಅಗೆಯುವಾಗ 82  ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಶೋಭಾ ಹಿರೇಮಠ್ ಎಂಬುವರಿಗೆ  ಸೇರಿದ ನಿವೇಶನದಲ್ಲಿ ಮನೆ ನಿರ್ಮಿಸಲು ಪಾಯ ಅಗೆಯುವ ಕೆಲಸ ನಡೆಯುತ್ತಿತ್ತು. ಸುಮಾರು 6 ಅಡಿ ಆಳದಲ್ಲಿ ತಾಮ್ರದ ಬಿಂದಿಗೆಯೊಂದರಲ್ಲಿ 82 ನಾಣ್ಯಗಳು ಪತ್ತೆಯಾಗಿವೆ.  ನಂತರ ಅದನ್ನು ತೆಗೆದುಕೊಂಡು ಮನೆ ಹೋಗಿ ಪರೀಕ್ಷಿಸಿದಾಗ ಅದು ಚಿನ್ನ ಎಂದು ಗೊತ್ತಾಗುತ್ತಿದ್ದಂತೆ ಕೆಲಸಗಾರರು ಇಂತಿಷ್ಟು ಹಣ ಕೊಟ್ಟು ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಹೇಳಲಾಗಿತ್ತು.

ಆದರೆ ಕೂಲಿಕಾರ್ಮಿಕನೊಬ್ಬ ಒಂದೆರಡು ನಾಣ್ಯಗಳನ್ನು ಇಟ್ಟುಕೊಂಡಿದ್ದ. ಅದನ್ನು ಮಾರಾಟ ಮಾಡಲು ಪ್ರಯತ್ನಿಸುವಾಗ ಅನುಮಾನ ಬಂದು ಆತನನ್ನು ಕೆಲವರು ವಿಚಾರಿಸಿದಾಗ ನಿಧಿ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.   ನಂತರ ಪೊಲೀಸರಿಗೂ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಂತರ ಮಾಲೀಕರಿಗೆ ತಿಳಿಹೇಳಿ ಸುಮಾರು 280 ಗ್ರಾಂ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮಾಹಿತಿ ದಾಖಲಾಗಿದೆ.

loading...

No comments