Breaking News

ಕೇಂದ್ರ ಸಚಿವೆ ಉಮಾಭಾರತಿ ರಾಜಿನಾಮೆ ನೀಡಲಿ : ಖರ್ಗೆ



ಕಲಬುರಗಿ :  ಸುಪ್ರಿಂ ಕೋರ್ಟ ಬಾಬ್ರಿ ಮಸೀದಿ ಧ್ವಂಸ ಕ್ರಿಮಿನಲ್ ಸಂಚು ಪ್ರಕರಣವು ಮರುಜೀವ ಪಡೆದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವರ ಉಮಾಭಾರತಿಯವರು ರಾಜೀನಾಮೆ ನೀಡಬೇಕು ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಇಂದು ನಗರಕ್ಕೆ ಆಗಮಿಸಿದ ಅವರ ಮಾಧ್ಯಮದವರೊಂದಿಗೆ ಮಾತನಾಡಿ ಬೇರೆಯವರ ಮೇಲೆ ಆರೋಪ ಬಂದಾಗ ಬಿಜೆಪಿಯವರು ರಾಜೀನಾಮೆ ಕೇಳುತ್ತಾರೆ. ಈ ವಿಷಯದಲ್ಲಿ ಪ್ರಧಾನ ಮಂತ್ರಿಗಳ ಮೌನವೇಕೆ?.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂದಾಗ ಅವರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಮತ್ತು ಚುನಾವಣೆ ಗೆಲ್ಲಲು ಬಿಜೆಪಿಯವರು ರಾಮಮಂದಿರ ವಿಷಯವನ್ನು ಎಳೆದು ತರುತ್ತಾರೆ. ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಅಧಿಕಾರದಲ್ಲಿ ಇರುವವರ ಹೆಸರು ಕೇಳಿ ಬಂದಿದೆ.ಆದ್ದರಿಂದ ಅವರ ರಾಜೀನಾಮೆ ಪಡೆಯದೇ ಪ್ರಧಾನಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

loading...

No comments