ಕರ್ನಾಟಕ ಬಿಜೆಪಿಯನ್ನು ಮುಗಿಸಲು ಗೊತ್ತು ಎಂದ ಯುವ ಬ್ರಿಗೇಡ್ ಮುಖಂಡ !
ಬೆಂಗಳೂರು : ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ . ಆಡಳಿತ ಪಕ್ಷ ಗೆಲ್ಲುವ ಕುದುರೆಯನ್ನು ಕಟ್ಟಿ ಹಾಕಲು ತಂತ್ರ ರೂಪಿಸುತ್ತಾ ಇದ್ದರೆ ಇತ್ತ ಕರ್ನಾಟಕ ಬಿಜೆಪಿ ತನ್ನ ಆಂತರಿಕ ಬಿನ್ನಮತದಲ್ಲಿ ದಿನ ಕಳೆಯುತ್ತಾ ಇದೆ .
ಮೊನ್ನೆ ನಡೆದ ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಗೆ ಬಾರಿ ಹಿನ್ನಡೆ ಆದಾಗ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ನೇತೃತ್ವದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡ ಒಂದು ಬಣ ಬಿಎಸ್ ವೈ ಅವರ ಕಾರ್ಯವೈಖರಿ ಮತ್ತು ನಾಯಕತ್ವದ ಬಗ್ಗೆ ಬಹಿರಂಗವಾಗಿ ಪ್ರಶ್ನೆ ಮಾಡಿತ್ತು .
ಈ ಎಲ್ಲಾ ಬೆಳವಣಿಗೆ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬಹಿರಂಗ ಪತ್ರ ಬರೆದು ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಅಸಮಾಧಾನ ಹೊರ ಹಾಕಿರುತ್ತಾರೆ ಮತ್ತು ಮುಂದಿನ ಮುಖ್ಯಮಂತ್ರಿಯಾಗಿ ಆರ್ ಎಸ್ ಎಸ್ ನಾಯಕ ಸಂತೊಪ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ .ಇದು ಬಿಜೆಪಿಯಲ್ಲಿನ ಒಳ ಜಗಳಕ್ಕೆ ಇನ್ನಷ್ಟು ತುಪ್ಪ ಸುರಿದ ಹಾಗೆ ಆಗಿದೆ. ಇತ್ತ ಯಡಿಯೂರಪ್ಪ ಬೆಂಬಲಿತ ಯುವಕರ ಪಡೆ ಸೂಲಿಬೆಲೆ ವಿರುದ್ಧ ಸಮರ ಸಾರುತ್ತ ಇತ್ತೀಚಿಗೆ ಸೂಲಿಬೆಲೆಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರ ಹಾಕಿತ್ತು .ಇದಕ್ಕೆ ತಾವೇನು ಕಮ್ಮಿ ಇಲ್ಲ ಎಂಬಂತೆ ಯುವ ಬ್ರಿಗೇಡ್ ಸಂಚಾಲಕ ನಿತ್ಯಾನಂದ ವಿವೇಕವಂಶಿ ಆಕ್ರೋಶಗೊಂಡು ನಮ್ಮ ವಿರುದ್ಧ ಮಾತನಾಡಿದರೆ ಕರ್ನಾಟಕ ಬಿಜೆಪಿಯನ್ನು ಮುಗಿಸಲು ಗೊತ್ತು ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಲೇಖನ ಒಂದು ಬರೆದು ಕರ್ನಾಟಕ ಬಿಜೆಪಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ .
ಅವರ ಈ ಹೇಳಿಕೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದು ನಮೋ ಬ್ರಿಗೆಡ್ (ಯುವ ಬ್ರಿಗೆಡ್) ತನ್ನ ಎಲ್ಲಾ ಕೆಲಸಗಳನ್ನು ನಿಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
loading...
No comments